ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಬಸ್ಪಾಸ್ ವಿತರಣೆ
ಮಂಗಳೂರು, ಸೆ.05, 2022: ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗ ವ್ಯಾಪ್ತಿಯ ಮೂಡಬಿದ್ರೆ ತಾಲೂಕಿನ ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಬಸ್ಪಾಸ್ ವಿತರಣೆಯನ್ನು ಸೆ.07ರ ಬುಧವಾರ ಮೂಡಬಿದ್ರೆ ಸಮಾಜ ಮಂದಿರದಲ್ಲಿ ಆಯೋಜಿಸಲಾಗಿದೆ.
ಅರ್ಹ ಎಂಡೋಸಲ್ಫಾನ್ ಫಲಾನುಭವಿಗಳು ವಿಕಲಚೇತನರ ಕಲ್ಯಾಣ ಇಲಾಖೆ ನೀಡಿರುವ ಎಂಡೋಸಲ್ಫಾನ್ ಕಾರ್ಡ್, ವಾಸ್ತವ್ಯ ಧೃಢೀಕರಣದ ಬಗ್ಗೆ ದಾಖಲಾತಿ(ಆಧಾರ್ ಕಾರ್ಡ್), ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಎರಡು ಭಾವಚಿತ್ರ ಮತ್ತು ಒಂದು ಸ್ಟ್ಯಾಂಪ್ ಸೈಜ್ ಭಾವಚಿತ್ರ ಹಾಗೂ ತಹಶೀಲ್ದಾರರ ಮಂಜೂರಾತಿ ಆದೇಶದ ಪ್ರತಿಯೊಂದಿಗೆ ಶಿಬಿರದಲ್ಲಿ ಹಾಜರಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.