ಆನಂದ್ ಅಸ್ನೋಟಿಕರ್ ಹೇಳಿಕೆ ಖಂಡನೀಯ: ಮಾಧವ ಬಿ ನಾಯಕ

 ಆನಂದ್ ಅಸ್ನೋಟಿಕರ್ ಹೇಳಿಕೆ ಖಂಡನೀಯ: ಮಾಧವ ಬಿ ನಾಯಕ
Share this post

ಕಾರವಾರ, ಏಪ್ರಿಲ್ 07, 2021: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಳೆದ ಎರಡು ದಿನದ ಹಿಂದೆ ಸಂಸದ ಅನಂತಕುಮಾರ ಹೆಗಡೆಯವರ ವಿರುದ್ಧ ಆಡಿದ ಆಕ್ಷೇಪಾರ್ಹ ಮಾತುಗಳನ್ನು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬಿ ನಾಯಕ ಖಂಡಿಸಿದ್ದಾರೆ.

ಇದು ಪ್ರಬುದ್ಧತೆ ಇಲ್ಲದ ವ್ಯಕ್ತಿಯೊಬ್ಬ ಮನಸ್ಸಿಗೆ ತೋಚಿದಂತೆ ಆಡಿದ ಮಾತು ಎಂಬುದು ಎಂತಹವರಿಗೂ ಅನ್ನಿಸುತ್ತದೆ. ಚಿಕ್ಕ ವಯಸ್ಸಿಗೆ ಮಂತ್ರಿಯಾಗಿದ್ದ ಆನಂದ್ ಅಸ್ನೋಟಿಕರ್ ರಾಜಕೀಯವಾಗಿ ಬೆಳೆಯಲು ಅವಕಾಶವಿತ್ತು. ಆರು ಬಾರಿ ಸಂಸದರಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ ಅನಂತಕುಮಾರ ಇದ್ದರೆಷ್ಟು ಸತ್ತರೆಷ್ಟು ಎಂಬ ಅಸ್ನೋಟಿಕರ್ ಹೇಳಿಕೆ ಅವರ ಬುದ್ಧಿಮಟ್ಟ ತೋರಿಸುತ್ತದೆ,” ಎಂದು ಹೇಳಿದ್ದಾರೆ.

Also read: Kashi Matadhipathi Shrimad Samyamindra Tirtha Swamiji interacts with Kashmiri Pandits

“ಹೆಚ್ಚಿನ ಕಾಲ ಗೋವಾದಲ್ಲೇ ಕಳೆಯುವ ಆನಂದ್ ಅಲ್ಲಿನ ವಾತಾವರಣ ದಿಂದ ಹಾಗೂ ಸಂಗತಿ ಸಂಗದೋಷದಿಂದ ಈ ರೀತಿ ವರ್ತಿಸುತ್ತಿದ್ದರೋ ಗೊತ್ತಾಗುತ್ತಿಲ್ಲ, ನಮ್ಮ ಸಂಸ್ಕಾರ ಸಂಸ್ಕೃತಿ ಮರೆತಿದ್ದಾರೆ ಎನ್ನುವದು ಅವರ ಮಾತಿನಿಂದ ಅರ್ಥವಾಗುತ್ತದೆ. ಅದರಿಂದ ಇನ್ನೂ ಹೊರಬರುವ ಪ್ರಯತ್ನವನ್ನೇ ಮಾಡಲು ಅವರು ಪ್ರಯತ್ನಿಸಿಲ್ಲ ಎಂದೆನಿಸುತ್ತದೆ,” ಎಂದು ಹೇಳಿದರು.

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ, ಶಾಶ್ವತ ಮಿತ್ರರೂ ಅಲ್ಲ. ಒಂದು ವೇಳೆ ಶತ್ರುವೇ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅವರ ಚೇತರಿಕೆಗೆ ಹಾರೈಸುವ ಪರಂಪರೆ ನಮ್ಮಲ್ಲಿದೆ. ಜಿಲ್ಲೆಯಲ್ಲಿ ಅನೇಕ ಮುತ್ಸದ್ಧಿ ನಾಯಕರು ಆಗಿಹೋಗಿದ್ದಾರೆ. ಆದರೆ ಈವರೆಗೆ ಯಾರೂ ನೀಡದ ಕ್ಷುಲ್ಲಕ ಹೇಳಿಕೆಯನ್ನು ನೀಡಿ ಆನಂದ ಅಸ್ನೋಟಿಕರ್ ಕೆಟ್ಟ ಪರಂಪರೆಗೆ ಕಾರಣೀಕರ್ತರಾಗಿದ್ದಾರೆ ಎಂದು ಖಂಡಿಸಿದ್ದಾರೆ.

ಸಂಸದ ಅನಂತಕುಮಾರ ಹೆಗಡೆಯವರು ಈ ಹಿಂದೆ ಶಿರಸಿಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾಗ ಅದನ್ನು ಮಾಧವ ನಾಯಕ ಬಲವಾಗಿ ಖಂಡಿಸಿದ್ದರು. ಹೆಗಡೆ ಮೇಲೆ ಕ್ರಮಜರುಗಿಸುವಂತೆ ದೂರನ್ನೂ ಕೊಟ್ಟಿದ್ದರು.

Also read: Uttara Kannada COVID Data: April 07

“ಅನೇಕ ಬಾರಿ ಅವರು ಸಮಾಜ ವಿರೋಧಿ ಹೇಳಿಕೆ ನೀಡಿದಾಗಲೂ ಅದನ್ನು ಖಂಡಿಸಿದ್ದೇನೆ. ಹಾಗಂತ ಅವರನ್ನು ವೈಯಕ್ತಿಕವಾಗಿ ದ್ವೇಷಿಸಲು ಕಾರಣವಿಲ್ಲ. ಅವರೂ ಕೂಡ ಯಾರನ್ನೂ ವೈಯಕ್ತಿಕವಾಗಿ ದ್ವೇಷಿಸುವ ವ್ಯಕ್ತಿಯೂ ಅಲ್ಲ. ಆದರೆ ಆನಂದ್ ಅಸ್ನೋಟಿಕರ್ ಮಾತ್ರ ತಮ್ಮ ಪ್ರಚಾರಕ್ಕೋ ಅಥವಾ ಕೆಳಮಟ್ಟದ ಬುದ್ಧಿಗೇಡಿತನದಿಂದಲೋ ನೀಡಿದ ಹೇಳಿಕೆಯನ್ನು ಸಮಾಜ ಒಪ್ಪುವುದಿಲ್ಲ.ಇದು ಅವರ ಪ್ರಜ್ಞಾಹೀನ ಹೇಳಿಕೆ,” ಎಂದು ಹೇಳಿದ್ದಾರೆ.

Also read: Jana Shakthi Vedike wants Judicial Inquiry into Anant Kumar Hegde’s statement

Subscribe to our newsletter!

Other related posts

error: Content is protected !!