ಕೃಷ್ಣಾಪುರ ಜನತಾ ಕಾಲೊನಿಯ ಸಾದುಲಿ ಜುಮಾ ಮಸೀದಿಗೆ ಕಲ್ಲೆಸೆತ : ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ

 ಕೃಷ್ಣಾಪುರ ಜನತಾ ಕಾಲೊನಿಯ ಸಾದುಲಿ ಜುಮಾ ಮಸೀದಿಗೆ ಕಲ್ಲೆಸೆತ : ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ
Share this post

ಮಂಗಳೂರು, ಏಪ್ರಿಲ್ 04, 2021: ಸುರತ್ಕಲ್ ಸಮೀಪದ ಕೃಷ್ಣಾಪುರದ ಜನತಾ ಕಾಲೊನಿಯ ಸಾದುಲಿ ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಮ್ ಮದರಸಕ್ಕೆ ನಿನ್ನೆ ರಾತ್ರಿ ದುರ್ಷ್ಕರ್ಮಿಗಳು ಕಲ್ಲು ಹೊಡೆದು ಕಿಟಿಕಿಯ ಗಾಜುಗಳನ್ನೆಲ್ಲ ಪುಡಿಗೈದ ಘಟನೆಯನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

“ಕಳೆದ ಕೆಲವು ದಿನಗಳಿಂದ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಬೇರ ಬೇರೆ ನೆಪಒಡ್ಡಿ, ಯುವಕರಿಗೆ ಮಾರಣಾಂತಿಕ ಹಲ್ಲೆ ಮಾಡುವುದು’ ಮುಸ್ಲಿಮರ ಪವಿತ್ರ ಸ್ಥಳಗಳಿಗೆ ಹಾನಿಯುಂಟುಮಾಡುವುದು, ಇಂದು ಯುವಕನೊಬ್ಬನನ್ನು ಕೊಲೆಮಾಡಿರವುದು, ಇದನ್ನೆಲ್ಲ ಗಮನಿಸಿದಾಗ ಮುಸ್ಲಿಮರ ಮೇಲೆ ಒಂದು ವ್ಯವಸ್ತಿತ ಸಂಚು ನಡೆಯುತ್ತಾ ಇದೆ. ಮುಸ್ಲಿಮರ ತಾಳ್ಮೆಯನ್ನು ಪರೀಕ್ಷಿಸುವ ಮೊದಲು ಸಂಬಂದಪಟ್ಟ ಗ್ರಹ ಇಲಾಖೆ ಕೂಡಲೆ ಎಚ್ಚೆತ್ತುಗೊಂಡು ಇದಕ್ಕೆ ಒಂದು ಪೂರ್ಣವಿರಾಮವನ್ನು ಹಾಕಬೇಕು. ಇಲ್ಲವಾದಲ್ಲಿ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟವು ಜಿಲ್ಲೆಯಲ್ಲಿರುವ ಎಲ್ಲಾ ಮುಸ್ಲಿಮರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆಯನ್ನು ಮಾಡಬೇಕಾಗಬಹುದು,” ಎಂದು ಒಕ್ಕೂಟ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ ಅಶ್ರಫ್ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also read: 12 year old boy murdered over tiff over online game

“ಈಗಾಗಲೇ ದುಷ್ಟರಿಗೆ ಸಿಂಹ ಸ್ವಪ್ನವಾಗಿರುವ, ದಕ್ಷ ಅಧಿಕಾರಿಯಾಗಿರುವ ಮಂಗಳೂರು ಪೋಲೀಸ್ ಕಮಿಷನ್ ರವರು ದ.ಕ ಜಿಲ್ಲೆಯಲ್ಲಿ ಟಾಸ್ಕ್ ಪೋರ್ಸ್ ಪಡೆಯನ್ನು ರಚಿಸಿ, ದುರ್ಷ್ಕರ್ಮಿಗಳನ್ನು ಮಟ್ಟಹಾಕಬೇಕು,” ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 6 ರಂದು ಮಂಗಳೂರಿನ ಹಲವೆಡೆ ಪವರ್ ಕಟ್
.

Subscribe to our newsletter!

Other related posts

error: Content is protected !!