ತಂಬಾಕು ನಿಯಂತ್ರಣ ಕಾರ್ಯಾಚರಣೆ

 ತಂಬಾಕು ನಿಯಂತ್ರಣ ಕಾರ್ಯಾಚರಣೆ
Share this post

ಮಂಗಳೂರು, ಡಿ.05, 2022: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾದಳ ಕೋಟ್ಪಾ 2003ರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಮತ್ತು ಶಾಲಾ ಆವರಣದಿಂದ 100 ಗಜಗಳ ಅಂತರದಲ್ಲಿನ ಅಂಗಡಿ, ಮುಂಗಟ್ಟುಗಳಿಗೆ ತೆರಳಿ ಪರಿಶೀಲಿಸಿ ತಂಬಾಕು ಪದಾರ್ಥಗಳನ್ನು ಕೋಟ್ಪಾ-2003 ಸೆಕ್ಷನ್ 6ಬಿ ಉಲ್ಲಂಘಿಸಿ ಮಾರಾಟ ಮಾಡುವವರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಷನ್-4 ಉಲ್ಲಂಘಿಸಿದವರಿಗೆ  ಕಾಯ್ದೆ ಬಗ್ಗೆ ವಿವರಿಸಿ ಕಾನೂನಿನ ಚೌಕಟ್ಟಿನಲ್ಲಿ ವ್ಯಾಪಾರ ಮಾಡಬಹುದು ಎಂಬುದರ ಬಗ್ಗೆ ಅರಿವು ಮೂಡಿಸಿ ಅಂಗಡಿ ಮುಂದೆ ಕಡ್ಡಾಯವಾಗಿ ಧೂಮಪಾನ ನಿಷೇಧಿಸಿದೆ ಎಂಬ ನಿಗಧಿತ ನಾಮಫಲಕ ಪ್ರದರ್ಶಿಸುವಂತೆ ಈ ಸಂದರ್ಭದಲ್ಲಿ ತಿಳಿಸಲಾಯಿತು.

ಕಾರ್ಯಾಚರಣೆಯಲ್ಲಿ ಒಟ್ಟು 27 ಪ್ರಕರಣ ದಾಖಲಿಸಿ, 3,450 ರೂ.ಗಳ ದಂಡ ವಿಧಿಸಲಾಯಿತು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ ಪುಂಡಲೀಕ್ ಲಕಾಟಿ, ಶ್ರುತಿ ಜೆ. ಸಾಲಿಯಾನ್, ವಿಜಯ್ ಕುಮಾರ್ ಪೊಲೀಸ್ ಪೇದೆ ಸುಮಾನ್ ಜಮಾದರ್, ಮನೋಜ್  ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಯ ಬೆಂಬಲದೊಂದಿಗೆ ಕಾರ್ಯಾಚರಣೆ ನಡೆಯಿತು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!