ಉಡುಪಿ: ಮೇ 18 ರಿಂದ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ, ಮೇ 12, 2022: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೈನಿಂಗ್ ಅಂಡ್ ಚೆಕ್ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಮೇ 18 ರಿಂದ 29 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದ ವೇಳಾಪಟ್ಟಿ ಹೀಗಿದೆ:
- ಮೇ 18 ರಂದು ಹಂದಾಡಿ ಹಾಗೂ ಹನ್ನೇಹಳ್ಳಿ ಗ್ರಾಮ ಪಂಚಾಯತ್ ಸಭಾಭವನ
- ಮೇ 19 ರಂದು ಚೇರ್ಕಾಡಿ ಹಾಗೂ ಕೊಕ್ಕರ್ಣೆ ಗ್ರಾಮ ಪಂಚಾಯತ್ ಸಭಾಭವನ
- ಮೇ 20 ರಂದು ಕೋಟತಟ್ಟು ಹಾಗೂ ಪಾಂಡೇಶ್ವರ ಗ್ರಾಮ ಪಂಚಾಯತ್ ಸಭಾಭವನ
- ಮೇ 21 ರಂದು ಹಾರಾಡಿ ಹಾಗೂ ಕೋಡಿ ಗ್ರಾಮ ಪಂಚಾಯತ್ ಸಭಾಭವನ
- ಮೇ 22 ರಂದು ಬಾರ್ಕೂರು ಹಾಗೂ ಐರೋಡಿ ಗಾಮ ಪಂಚಾಯತ್ ಸಭಾಭವನ
- ಮೇ 23 ರಂದು ಚಾಂತಾರು ಹಾಗೂ ವಾರಂಬಳ್ಳಿ ಗ್ರಾಮ ಪಂಚಾಯತ್ ಸಭಾಭವನ
- ಮೇ 24 ರಂದು ಬಿಲ್ಲಾಡಿ ಹಾಗೂ ಹೆಗ್ಗುಂಜೆ ಗಾಮ ಪಂಚಾಯತ್ ಸಭಾಭವನ
- ಮೇ 25 ರಂದು ಕಾಡೂರು ಹಾಗೂ ಉಪ್ಪೂರು ಗ್ರಾಮ ಪಂಚಾಯತ್ ಸಭಾಭವನ
- ಮೇ 26 ರಂದು ಕರ್ಜೆ ಹಾಗೂ ಯಡ್ತಾಡಿ ಗ್ರಾಮ ಪಂಚಾಯತ್ ಸಭಾಭವನ
- ಮೇ 27 ರಂದು ಆರೂರು ಹಾಗೂ ವಡ್ಡರ್ಸೆ ಗ್ರಾಮ ಪಂಚಾಯತ್ ಸಭಾಭವನ
- ಮೇ 29 ರಂದು ಕೋಟ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
18 ರಿಂದ 60 ವರ್ಷದೊಳಗಿನ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರು, ಕಟ್ಟಡ ಕಾರ್ಮಿಕ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಹಾಗೂ ರೇಷನ್ ಕಾರ್ಡ್ನ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.