ಮಂಗಳೂರು: ನೂತನ ಬ್ರಹ್ಮರಥ ಸಮರ್ಪಣೆ


ಮಂಗಳೂರು, ಫೆ 02, 2022: ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವ ಫೆ 7 ರಂದು ನಡೆಯಲಿದೆ. ಈ ಬಾರಿ ನೂತನ ಬ್ರಹ್ಮರಥ ನಿರ್ಮಾಣಗೊಂಡಿದ್ದು ಇದರ ಸಮರ್ಪಣಾ ಕಾರ್ಯಕ್ರಮ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಬುಧವಾರ ಅಭಿಜಿನ್ ಮುಹೂರ್ತದಲ್ಲಿ ನೆರವೇರಿತು.
ಬೆಳಿಗ್ಗೆ ಶ್ರೀ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ, ತದನಂತರ ವೈದಿಕರಿಂದ ಯಾಗ ಶಾಲೆಯಲ್ಲಿ ರಥ ಸಮರ್ಪಣಾ ಯಜ್ಞ ಧಾರ್ಮಿಕ ವಿಧಿವಿಧಾನಗಳು ಶ್ರೀಗಳವರ ಉಪಸ್ಥಿತಿಯಲ್ಲಿ 11:30 ಕ್ಕೆ ಯಜ್ಞ ಪೂರ್ಣಾಹುತಿ ನಡೆದು ಬಳಿಕ ಪ್ರಧಾನ ವೀರ ವೆಂಕಟೇಶ ಮತ್ತು ಉತ್ಸವ ಶ್ರೀ ಶ್ರೀನಿವಾಸ ದೇವರ ರಥಾರೋಹಣ ನಡೆಯಿತು.
ನೂತನ ರಥ ಸಮರ್ಪಣೆ ಗೆ ಸೇವೆ ಸಲ್ಲಿಸಿದ ಭಕ್ತರಿಗೆ ಶ್ರೀಗಳು ಗಂಧ ಪ್ರಸಾದ ನೀಡಿದರು. ರಾತ್ರಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀಗಳವರ ಉಪಸ್ಥಿತಿಯಲ್ಲಿ ಸ್ವರ್ಣ ಗರುಡವಾಹನ ಸೇವೆ ನಡೆಯಿತು. ದೇವಳ ದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾಲ್ಯ