ಸಮಾಜಕ್ಕೆ ಯುವಕ ಮಂಡಲ ಕೊಡುಗೆ ಅಪಾರ: ಕೆ ಯಾದವ ಶೆಟ್ಟಿ

 ಸಮಾಜಕ್ಕೆ ಯುವಕ ಮಂಡಲ ಕೊಡುಗೆ ಅಪಾರ: ಕೆ ಯಾದವ ಶೆಟ್ಟಿ
Share this post

ಮಂಗಳೂರು, ಡಿ 19, 2021: “ಶಿಕ್ಷಣಕ್ಕೆ ಒತ್ತು ಕೊಟ್ಟು ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕೆಂದು ಬಯಸಿ ಪಕ್ಕಲಡ್ಕ ಯುವಕ ಮಂಡಲವು ರಾತ್ರಿ ಶಾಲೆಯನ್ನು ಪ್ರಾರಂಭಿಸುವ ಮೂಲಕ ಊರಿನ ಅನಕ್ಷರಸ್ಥರಿಗೆ ಅಕ್ಷರಭ್ಯಾಸವನ್ನು ಕಲಿಸಿದೆ. ಕಳೆದ 68 ವರುಷಗಳಿಂದ ಸಮಾಜದ ಏಳಿಗೆಗಾಗಿ ಶ್ರಮಿಸಿದ ಯುವಕ ಮಂಡಲವು ತನ್ನಲ್ಲಿ ಹಲವು ಕಾರ್ಯಕರ್ತರು ಮುಂದೆ ಜಿಲ್ಲೆಯ ಕಾರ್ಮಿಕ ವರ್ಗದ ಏಳಿಗೆಯ ಹೋರಾಟದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳಲು ಪ್ರೇರೇಪಿಸಿದೆ,” ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಹೇಳಿದರು.

ಅವರು ಇಂದು ಪಕ್ಕಲಡ್ಕ ಯುವಕ ಮಂಡಲದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 

ಕೋರೋನಾ ಕಾಲದಲ್ಲಿ ಯುವಕ ಮಂಡಲದ ಸದಸ್ಯರು ಊರಿನ ನೂರಾರೂ ಜನರಿಗೆ ಅಗತ್ಯ ಆಹಾರ ಸಾಮಾಗ್ರಿ ನೀಡಿದ್ದನ್ನು ಕಂಡಿದ್ದೇನೆ. ಕೋರೋನಾ ರೋಗಕ್ಕೆ ಒಳಗಾದವರಿಗೆ ಅಗತ್ಯ ಔಷಧಿಗಳನ್ನು ಒದಗಿಸುವುದು, ಸೋಂಕಿತ ಮನೆಗಳಿಗೆ ಸಾನಿಟೈಸ್ ಮಾಡುವುದು, ತುರ್ತು ಸಂದರ್ಭದಲ್ಲಿ ರಕ್ತ ದಾನ ಮಾಡಿರುವುದು, ಕೊರೋನಾ ರೋಗಕ್ಕೆ ಬಲಿಯಾದ ಮೃತದೇಹವನ್ನು ಅಂತ್ಯ ಸಂಸ್ಕಾರ ನಡೆಸುವುದು ನಿಜಕ್ಕೂ ಶ್ಲಾಘನೀಯ. ಈ ಎಲ್ಲಾ ಕಾರ್ಯಗಳಿಂದ ಪಕ್ಕಲಡ್ಕ ಯುವಕ ಮಂಡಲವು ಜಿಲ್ಲೆಯ ಇತರ ಯುವಕ ಯುವಕ ಮಂಡಲಗಳಿಗೆ ಮಾದರಿಯಾಗಿದೆ. ಇಂತಹ ಜನಪರ ಕೆಲಸಗಳು ಮುಂದುವರಿಯಲಿ ಮುಂದಿನ ಯುವಕ ಮಂಡಲದ ಸದಸ್ಯರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡುವಂತಾಗಲಿ ಎಂದರು.

ಪಕ್ಕಲಡ್ಕ ಯುವಕ ಮಂಡಲದ ಮಾಜಿ ಕಾರ್ಯದರ್ಶಿ, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ಸಂಸ್ಥೆಯ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್, ಹಿರಿಯ ಮಾಜಿ ಮುಖಂಡರಾದ ನಾರಾಯಣ ಕುಲಾಲ್, ಸಿಪಿಐಎಂ ಪಕ್ಷದ ಜಿಲ್ಲಾ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಪಕ್ ಬಜಾಲ್ ವಹಿಸಿದ್ದರು.

ಮಹಾಸಭೆಯಲ್ಲಿ ಮಾಜಿ ಯುವಕ ಮಂಡಲದ ಕಾರ್ಯದರ್ಶಿ, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಯುವಕ ಮಂಡಲದ ಸದಸ್ಯರಾಗಿ ಪ್ರಾರಂಭಿಸಿ ಮುಂದೆ ಮುಖಂಡರಾಗಿ ಉದ್ಯೋಗದ ನಿಮಿತ್ತ ವಿದೇಶದಲ್ಲಿದ್ದರೂ ಊರಲ್ಲಿ ಸಮಸ್ಯೆಗೊಳಗಾದ ಕುಟುಂಬಗಳಿಗೆ, ವಿದ್ಯಾರ್ಥಿಗಳು ಮತ್ತು ಅಸಹಾಯಕರಿಗೆ ಮಾಡುವ ಸಹಾಯಹಸ್ತ ಕೆಲಸವನ್ನು ಯುವಕ ಮಂಡಲವು ಅಭಿನಂದಿಸಿತು.

ಅದೇ ರೀತಿ ಯುವಕ ಮಂಡಲದ ಸದಸ್ಯರಾಗಿದ್ದುಕೊಂಡು ಚಳುವಳಿ ಜೀವನ ಪ್ರಾರಂಭಿಸಿ ಈಗ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆಯ್ಕೆಯಾಗಿ ದುಡಿಯುವ ವರ್ಗದ ಹೋರಾಟವನ್ನು ಮುನ್ನಡೆಸುತ್ತಿರುವ ಕೆ ಯಾದವ ಶೆಟ್ಟಿಯವರಿಗೂ, ಯುವ ಮುಖಂಡ ಸಂತೋಷ್ ಬಜಾಲ್, ಸಿಪಿಐಎಂ ಪಕ್ಷದ ಮಂಗಳೂರು ನಗರ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂತೋಷ್ ಬಜಾಲ್ ಅವರಿಗೂ ಮಹಾಸಭೆಯ ವೇಳೆ ಅಭಿನಂದಿಸಲಾಯಿತು.

ಮಹಾಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿ ಚರ್ಚಿಸಲಾಯಿತು. ಹಾಗೂ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಜಗದೀಶ್ ಬಜಾಲ್ ಸ್ವಾಗತಿಸಿ, ಪ್ರಿತೇಶ್ ಬಜಾಲ್ ವಂದಿಸಿದರು.

Subscribe to our newsletter!

Other related posts

error: Content is protected !!