ಸೆ 25 ರಂದು ‘ಭಾರತದ ಕಮ್ಯುನಿಸ್ಟ್ ಚಳುವಳಿಯ ಪ್ರಾರಂಭದ ಹೆಜ್ಜೆ ಗುರುತುಗಳು’ ಪುಸ್ತಕ ಬಿಡುಗಡೆ
ಮಂಗಳೂರು, ಸೆ 18, 2022: ಭಾರತದ ಕಮ್ಯುನಿಸ್ಟ್ ಚಳುವಳಿಯಲ್ಲಿ ಪ್ರಾರಂಭದ ಹೆಜ್ಜೆ ಗುರುತುಗಳು ಎಂಬ ಚಾರಿತ್ರಿಕ ವಸ್ತು ವಿಶ್ಲೇಷಣೆಯ ಪುಸ್ತಕ ಬಿಡುಗಡೆ ಸಮಾರಂಭವು ಸೆ 25 ರಂದು ಬೆಳಿಗ್ಗೆ 10.30ಕ್ಕೆ ನಗರದ ಬಲ್ಮಠದಲ್ಲಿರುವ ಸಹೋದಯ ಹಾಲ್ ನಲ್ಲಿ ಜರುಗಲಿದೆ .
ಪುಸ್ತಕ ಬಿಡುಗಡೆಯನ್ನು CITU ಸಂದೇಶ ಮಾಸಿಕ ಪತ್ರಿಕೆಯ ಸಂಪಾದಕರೂ,ರಾಜ್ಯ ಕಾರ್ಮಿಕ ನಾಯಕರಾದ ಕೆ.ಮಹಾಂತೇಶ್ ರವರು ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿಯವರು ವಹಿಸಲಿದ್ದಾರೆ. ನಿವ್ರತ್ತ ಫ್ರೊಫೆಸರ್ ಡಾ.ಕೆ.ರಾಜೇಂದ್ರ ಉಡುಪರವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವ್ರತ್ತ ಪ್ರಾಂಶುಪಾಲರಾದ ಡಾ.ಎನ್ ಇಸ್ಮಾಯಿಲ್ ರವರು ಭಾಗವಹಿಸಲಿದ್ದಾರೆ .
ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ನಾಯಕರಾದ ಮುಝಾಫರ್ ಅಹಮ್ಮದ್ ರವರು ಬರೆದಿರುವ ಇಂಗ್ಲಿಷ್ ಆವೃತ್ತಿ ಪುಸ್ತಕವನ್ನು ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ಕನ್ನಡಕ್ಕೆ ಅನುವಾದಿಸಿದ್ದು, ಮಂಗಳೂರಿನ ಪ್ರಗತಿಪರ ಜನಸಮುದಾಯ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದೆ ಎಂದು ಪ್ರಕಾಶಕರಾದ ಸುನಿಲ್ ಕುಮಾರ್ ಬಜಾಲ್ ರವರು ತಿಳಿಸಿದ್ದಾರೆ.