ಆ.9 ರಿಂದ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಉಚಿತ ಬಸ್ ಪಾಸ್ ವಿತರಣೆ

 ಆ.9 ರಿಂದ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಉಚಿತ ಬಸ್ ಪಾಸ್ ವಿತರಣೆ
Share this post

ಮಂಗಳೂರು, ಆ.05, 2021: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಉಚಿತ ಬಸ್ ಪಾಸ್‍ಗಳನ್ನು ಆ.9 ರಿಂದ ವಿತರಿಸಲಾಗುತ್ತದೆ.

ಬಸ್ ಪಾಸ್ ವಿತರಿಸುವ ಸ್ಥಳಗಳ ವಿವರ ಇಂತಿದೆ:

ಆಗಸ್ಟ್ 9 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಂಟ್ವಾಳ ತಾಲೂಕಿನ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.
ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಗಂಟೆಯವರೆಗೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಡೋಸಂತ್ರಸ್ಥರ ಪಾಲನಾ ಕೇಂದ್ರದಲ್ಲಿ ಮತ್ತು ಆಗಸ್ಟ್ 11 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.
ಆಗಸ್ಟ್ 12 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪುತ್ತೂರು ತಾಲೂಕಿನ ಕೊೈಲ ಪಂಚಾಯತ್ ಕಚೇರಿಯಲ್ಲಿ.
ಆಗಸ್ಟ್ 13 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಸಂಚಾರ ನಿಯಂತ್ರಣ.

ಎಂಡೋಸಲ್ಫಾನ್ ಸಂಸ್ರಸ್ಥರು ಹಾಗೂ ಅವರ ಕುಟುಂಬದವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸುತ್ತೋಲೆಯನ್ವಯ ವಿಕಲಚೇತನರ ಕಲ್ಯಾಣ ಇಲಾಖೆ ನೀಡಿರುವ ಎಂಡೋಸಲ್ಫಾನ್ ಗುರುತಿನ ಕಾರ್ಡ್ ಹಾಗೂ ಯಥಾ ಪ್ರತಿ, ವಾಸ್ತವ್ಯ ದೃಡೀಕರಣದ ಬಗ್ಗೆ ದಾಖಲಾತಿ, ಪಾಸ್ ಪೋರ್ಟ್ ಅಳತೆಯ ಎರಡು ಪೋಟೋ, ಅಂಚೆ ಚೀಟಿ ಅಳತೆಯ ಒಂದು ಪೋಟೋ ಹಾಗೂ ವೈದ್ಯಕೀಯ ಪರೀಕ್ಷೆಗಳ ವರದಿ/ ಕಂದಾಯ ಇಲಾಖೆಯಿಂದ ಒದಗಿಸಿದ ಮಂಜೂರಾತಿ ಆದೇಶದ ಪ್ರತಿಯೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಎಂಡೋಸಲ್ಫಾನ್ ಉಚಿತ ಪಾಸನ್ನು ಪಡೆಯಬಹುದಾಗಿದೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!