ಕೋಟ್ಪಾ ಕಾಯ್ದೆಯ ಉಲ್ಲಂಘನೆ: 11 ಪ್ರಕರಣ ದಾಖಲು

 ಕೋಟ್ಪಾ ಕಾಯ್ದೆಯ ಉಲ್ಲಂಘನೆ: 11 ಪ್ರಕರಣ ದಾಖಲು
Share this post

ಮಂಗಳೂರು, ಜುಲೈ 17, 2021: ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಆಹಾರ ಗುಣಮಟ್ಟದ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಹಾಗೂ ಮಂಗಳೂರು ತಾಲೂಕು ಆರೋಗ್ಯಾಧಿಕಾರಿಯ ನೇತೃತ್ವದಲ್ಲಿ ಜು.16ರ ಶುಕ್ರವಾರ ನಗರದ ಬರ್ಕೆ, ಬೋಳೂರು ಸುಲ್ತಾನ್ ಬತ್ತೇರಿ ಶಾಲಾ ಪರಿಸರದಲ್ಲಿ ಕೋಟ್ಪಾ ಕಾಯ್ದೆಯ ಉಲ್ಲಂಘನೆ ಕುರಿತ ಕಾರ್ಯಚರಣೆ ನಡೆಸಲಾಯಿತು.

ಕೋಟ್ಪಾ ಕಾಯ್ದೆಯ ಸೆಕ್ಷನ್ 4 ಹಾಗೂ 6ಚಿ ಪ್ರಕಾರ 11 ಪ್ರಕರಣ ದಾಖಲಿಸಿ, 1,400 ರೂ.ಗಳ ದಂಡ ಸಂಗ್ರಹಿಸಲಾಯಿತು. ಇದೇ ಸಂದರ್ಭದಲ್ಲಿ ಕಾಯ್ದೆ ಕುರಿತಂತೆ ಅಂಗಡಿ ಮಾಲಿಕರಿಗೆ ಮಾಹಿತಿ ನೀಡಲಾಯಿತು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಡಾ. ಹನುಮಂತರಾಯಪ್ಪ, ಸಮಾಜ ಕಾರ್ಯಕರ್ತರಾದ ಶ್ರುತಿ ಜೆ ಸಾಲ್ಯಾನ್, ಆಪ್ತ ಸಮಾಲೋಚಕ ವಿಜಯ್ ಕುಮಾರ್, ಕಚೇರಿ ಸಿಬ್ಬಂದಿ ವಿದ್ಯಾ, ಆರೋಗ್ಯ ಮೇಲ್ವ್ವಿಚಾರಕರಾದ ಪ್ರದೀಪ್ ಕುಮಾರ್, ಮದುಮೀರಾ ಕೆ ಬರ್ಕೆ ಠಾಣಾ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು

Subscribe to our newsletter!

Other related posts

error: Content is protected !!