ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ
ಧರ್ಮಸ್ಥಳ, ಮಾರ್ಚ್ 28, 2021: ಬದುಕು ಕಟ್ಟೋಣ ತಂಡದ ಸ್ವಯಂ ಸೇವಕರು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಭಾನುವಾರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ ನಡೆಸಿದರು.
ಸ್ವಯಂ ಸೇವಕರ ಸೇವಾ ಕಾರ್ಯವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಇದನ್ನೂ ಓದಿ: ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳಿಗೆ 25 ಲಕ್ಷ ರೂ. ನೆರವು ಘೋಷಿಸಿದ ಡಿ. ವೀರೇಂದ್ರ ಹೆಗ್ಗಡೆ
ಉಜಿರೆಯ ಬದುಕು ಕಟ್ಟೋಣ ತಂಡದ ನಾಯಕರಾದ ಮೋಹನ ಕುಮಾರ್, ರಾಜೇಶ್ ಪೈ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ ರಾವ್ ಮತ್ತು ಸದಸ್ಯರು, ಧರ್ಮಸ್ಥಳ ವಿಪತ್ ಸೇವಾ ಸಮಿತಿ, ಎಸ್.ಡಿ.ಎಮ್. ಕಾಲೇಜಿನ ಸ್ವಯಂ ಸೇವಕರು, ಧರ್ಮಸ್ಥಳದ ನೌಕರರು ಹಾಗೂ ಊರ ನಾಗರಿಕರು ಸೇರಿದಂತೆ 350ಕ್ಕೂ ಅಧಿಕ ಮಂದಿ ನದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.
ಇದನ್ನೂ ಓದಿ: ಧರ್ಮಸ್ಥಳದ 2 ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ಖಾಸಗಿ ಹೋಟೆಲ್, ವಸತಿಗೃಹ ಆರಂಭಿಸದಂತೆ ನಾಗರಿಕರ ಮನವಿ
ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು, ಜಾಗೃತಿ ಮೂಡಿಸಿದರು.
ತುಳು ಚಲನ ಚಿತ್ರ ನಟ ಅರವಿಂದ ಬೋಳಾರ್ ಸ್ವಚ್ಛತಾ ಪರಿಕರಗಳನ್ನು ವಿತರಿಸಿದರು.