ಅಪಾರ್ಟ್‍ಮೆಂಟ್‍ಗಳ ಮಾರುಕಟ್ಟೆ ಮೌಲ್ಯ, ಹೆಸರು ಮತ್ತು ರಸ್ತೆಗಳ ಹೆಸರು ತಿದ್ದುಪಡಿ : ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

 ಅಪಾರ್ಟ್‍ಮೆಂಟ್‍ಗಳ ಮಾರುಕಟ್ಟೆ ಮೌಲ್ಯ, ಹೆಸರು ಮತ್ತು ರಸ್ತೆಗಳ ಹೆಸರು ತಿದ್ದುಪಡಿ : ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
Share this post

ಮಂಗಳೂರು, ಡಿ10 2020: ಮಂಗಳೂರು ನಗರದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾಪನ ಸಮಿತಿಯ 2019ನೇ ಸಾಲಿನಲ್ಲಿ ಹೊಸ/ಹಳೆಯ ಬಿಟ್ಟು  ಹೋದ ಅಪಾರ್ಟ್‍ಮೆಂಟ್‍ಗಳ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಿ ಹಾಗೂ ಅಪಾರ್ಟ್‍ಮೆಂಟ್‍ಗಳ ಹೆಸರು ಮತ್ತು ಇದರ  ರಸ್ತೆಗಳ ಹೆಸರು ತಿದ್ದುಪಡಿಗೆ ಹಾಗೂ ಬಿಟ್ಟು ಹೋಗಿರುವ ರಸ್ತೆಗಳ ಸೇರ್ಪಡೆಗೆ ಸಂಬಂಧಪಟ್ಟ ಕಛೇರಿಯಲ್ಲಿ ಕರಡು ಮಾಹಿತಿಗಾಗಿ ಸೂಚನಾ ಫಲಕ ಸಲ್ಲಿಸಲಾಗಿದೆ.

ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸ್ಥಿರ ಸ್ವತ್ತುಗಳ ಮೌಲ್ಯಮಾಪನ ಉಪಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಉಪ ನೋಂದಾಣಾಧಿಕಾರಿ ಕಛೇರಿ ಮಂಗಳೂರಿಗೆ ಸಲ್ಲಿಸಬಹುದಾಗಿದೆ.

Subscribe to our newsletter!

Other related posts

error: Content is protected !!