ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 73 ನೆ ಜನ್ಮದಿನ ಆಚರಣೆ


ಬೆಳ್ತಂಗಡಿ, ನ 25: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 73 ನೆ ಜನ್ಮದಿನವನ್ನು ಧರ್ಮಸ್ಥಳದಲ್ಲಿ ಇಂದು ಸರಳವಾಗಿ ಆಚರಿಸಲಾಯಿತು.
ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಬಿ. ಅಪ್ಪಣ್ಣ ಹೆಗ್ಡೆ ಮೊದಲಾದವರು ಹೆಗ್ಗಡೆಯವರಿಗೆ ಗೌರವಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಅರ್ಪಿಸಿದರು.
ಸಾವಿರಾರು ಮಂದಿ ಅಭಿಮಾನಿಗಳು, ಭಕ್ತರು ದೂರವಾಣಿ, ವಾಟ್ಸಾಪ್, ವಿದ್ಯುದಂಚೆ ಮೂಲಕ ಶುಭಾಶಯ ಸಲ್ಲಿಸಿದರು.
Also read
- Today’s Rubber price (Kottayam and International market)
- Udupi Mallige and Jaaji today’s price
- Kateel Sri Durgaparameshwari today’s Alankara
- Daily Panchangam
- Bihar Development Drive