ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ನೋಂದಣಿ ಕಛೇರಿ ಉದ್ಘಾಟನೆ
ಧರ್ಮಸ್ಥಳ, ಮಾರ್ಚ್ 03, 2024: ಧರ್ಮಸ್ಥಳದಲ್ಲಿ ೨೦೨೪ರ ಮೇ ಒಂದರಂದು ಬುಧವಾರ ಸಂಜೆ ಗಂಟೆ ೬.೪೫ ಕ್ಕೆ (6.45 pm) ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ೫೨ನೇ (52nd) ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ವಿವಾಹ ನೋಂದಣಿ ಕಛೇರಿಯನ್ನು ದೇವಸ್ಥಾನದ ಬಳಿ ಇರುವ ಪ್ರವಚನ ಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಅವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಭಾನುವಾರ ಉದ್ಘಾಟಿಸಿ ಶುಭ ಹಾರೈಸಿದರು.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್, ನಿವೃತ್ತ ಮುಖ್ಯೋಪಾಧ್ಯಾಯ ಧರ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ೦೮೨೫೬-೨೬೬೬೪೪ (08256-266644), ವಾಟ್ಸಪ್ ನಂ. ೯೬೬೩೪೬೪೬೪೮ (9663464648), ೮೧೪೭೨೬೩೪೨೨ (8147263422) ಸಂಪರ್ಕಿಸಬಹುದು.