ಟೆಸ್ಟ್ ಡ್ರೈವ್ ಗೆ ವಾಹನ ಪಡೆದು ಪರಾರಿ

ಮಣಿಪಾಲ್, ನ 02: ಟೆಸ್ಟ್ ಡ್ರೈವ್ ಗೆ ವಾಹನ ಪಡೆದ ವ್ಯಕ್ತಿ ವಾಹನದೊಂದಿಗೆ ಪರಾರಿಯಾದ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಟೋಬರ್ 31 ರಂದು ಮಧ್ಯಾಹ್ನ 2.50 ಕ್ಕೆ ಲಕ್ಷ್ಮೀಂದ್ರ ನಗರದಲ್ಲಿರುವ ನ್ಯೂ ಮಣಿಪಾಲ್ ಬಜಾರ್ ಎಂಬ ಸೆಕೆಂಡ್ ಹ್ಯಾಂಡ್ ಶಾಪ್ ಗೆ ವ್ಯಕ್ತಿಯೊಬ್ಬ ಬಂದು ತನ್ನನ್ನು ಗಣೇಶ್ ಉದ್ಯಾವರ ಎಂದು ಪರಿಚಯಿಸಿಕೊಂಡು ಹಳೆಯ ದ್ವಿಚಕ್ರ ವಾಹನ ಬೇಕೆಂದು ಅಲ್ಲೇ ಇದ್ದ ಟಿ ವಿ ಎಸ್ ವಿಕ್ಟರ್ ಬೈಕನ್ನು ಟೆಸ್ಟ್ ರೈಡ್ ಗೆ ಪಡೆದುಕೊಂಡರು.
ಬೈಕ್ ನ್ನು ಚಲಾಯಿಸಿಕೊಂಡು ಹೋದ ಆ ವ್ಯಕ್ತಿ ವಾಪಾಸ್ ನೀಡದೆ ಮೋಸ ಮಾಡಿರುವುದಾಗಿ ಮಣಿಪಾಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
Also read:
- Daily Panchangam
- Sri Dharmasthala Mela Yakshagana show today
- Kateel Mela Yakshagana details
- Today’s Rubber price (Kottayam and International market)
- Udupi Mallige and Jaaji today’s price