ಶ್ರೀಕೃಷ್ಣಾಪುರ ಪರ್ಯಾಯೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

 ಶ್ರೀಕೃಷ್ಣಾಪುರ ಪರ್ಯಾಯೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ
Share this post

ಜನವರಿ 24:

ಉಡುಪಿ, ಜ 24, 2022: ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ವೈಭವ” ನಡೆಯಿತು.


ಜನವರಿ 20:

ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ, ಪುಣೆಯ ಅವಧೂತ ಗಾಂಧಿ ಮತ್ತು ಬಳಗ,ಆಳಂದಿ ಇವರಿಂದ ಮಹಾರಾಷ್ಟ್ರ ಸಂತ ಸಾಹಿತ್ಯ,ಜಾನಪದ, ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು

ಜನವರಿ 19:

ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ, ಚೆನ್ನೈ ನ ವಿದುಷಿ ಮಹತಿ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು.

ಜನವರಿ 18:


ಜನವರಿ 14:

ಶ್ರೀಕೃಷ್ಣಾಪುರ ಮಠದ  ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ,ಶ್ರೀಮತಿ ವಿದುಷಿ ರಶ್ಮೀ ಉಡುಪ ಮಂಗಳೂರು ಇವರಿಂದ ಭರತನಾಟ್ಯ ನಡೆಯಿತು.

ಜನವರಿ 13:

ಶ್ರೀಕೃಷ್ಣಾಪುರ ಮಠದ  ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ,ಶ್ರೀಮತಿ ದಿಶಾ ಚೇತನ ರಾವ್ ಮತ್ತು ಬಳಗದವರಿಂದ ವೀಣಾವಾದನ ನಡೆಯಿತು.

ಜನವರಿ 12:

ಕರ್ನಾಟಕ ಶಾಸ್ತ್ರೀಯ ಸಂಗೀತ

ಶ್ರೀಕೃಷ್ಣಾಪುರ ಮಠದ  ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ,ಕುಮಾರಿ ಅಂಜಲಿ ರವೀಂದ್ರ ,ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು.

ವೀಣಾವಾದನ

ಶ್ರೀಕೃಷ್ಣಾಪುರ ಮಠದ  ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ,ವಿದುಷಿ ಶುಭಶ್ರೀ ಅಡಿಗ ಮತ್ತು ಬಳಗದವರಿಂದ ವೀಣಾವಾದನ ನಡೆಯಿತು.

ಭಕ್ತಿ ಸಂಗೀತ

ಶ್ರೀಕೃಷ್ಣಾಪುರ ಮಠದ ಚತುರ್ಥ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ, ಹೇಮಲತಾ ಎ. ರಾವ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ನಡೆಯಿತು.

ಜನವರಿ 11: ಹರಿಕಥೆ

ಶ್ರೀಕೃಷ್ಣಾಪುರ ಮಠದ ಚತುರ್ಥ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ,ಭಾವನಾ ಮಂಜಿತ್ತಾಯ,ಕೆರೆಮಠ ಇವರಿಂದ ಹರಿಕಥೆ ನಡೆಯಿತು.

ಉಡುಪಿ, ಜ 11, 2022: ಶ್ರೀಕೃಷ್ಣಾಪುರ ಮಠದ ಚತುರ್ಥ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಲ್.ಐ.ಸಿ. ಆಫ್ ಇಂಡಿಯಾ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಬಿಂದು ರಾಬರ್ಟ್ ರವರು ಉದ್ಘಾಟಿಸಿ, ಶ್ರೀಕೃಷ್ಣನ ಸಂದೇಶದಂತೆ ಪ್ರಜೆಗಳ ಯೋಗ, ಕ್ಷೇಮಗಳಲ್ಲಿ ಉಡುಪಿಯ ಜನತೆಯೊಂದಿಗೆ ಎಲ್.ಐ.ಸಿ. ಯಾವತ್ತೂ ಭಾಗಿಯಾಗಲು ಸಂತೋಷ ಪಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ವಿಭಾಗದ ಮಾರಾಟ ಅಧಿಕಾರಿ ರಮೇಶ್ ಭಟ್ ಹಾಗೂ ಉಡುಪಿ ವಿಭಾಗದ ಪ್ರಬಂಧಕರಾದ ಶ್ಯಾಮ್ ಸುಂದರ್ ಉಪಸ್ಥಿತರಿದ್ದರು.ಪರ್ಯಾಯೋತ್ಸವ ಸಮಿತಿಯ ಎಂ.ಎಲ್.ಸಾಮಗರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸಮಿತಿಯ ಕಾರ್ಯದರ್ಶಿ ವಿಷ್ಣು ಪಾಡಿಗಾರ್ ಧನ್ಯವಾದವಿತ್ತರು.

Subscribe to our newsletter!

Other related posts

Leave a Reply

Your email address will not be published.

error: Content is protected !!