ಉಡುಪಿ, ಅ 14: ಶ್ರೀಕೃಷ್ಣ ಮಠದಲ್ಲಿ ನಿರಂತರ ಭಜನೆ ಉದ್ಘಾಟನೆಯನ್ನು ಪರ್ಯಾಯ ಅದಮಾರು ಹಿರಿಯ ಮಠಾಧಿಪತಿಗಳಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು,ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹಾಗೂ ಚಿತ್ರಾಪುರ ಮಠಾಧೀಶರಾದ ಶ್ರೀವಿದ್ಯೇಂದ್ರತೀರ್ಥ ಶ್ರೀಪಾದರೊಂದಿಗೆ ದೀಪ ಬೆಳಗಿಸಿ ಮತ್ತು ದಸರಾ ಪದಗಳನ್ನು ಹಾಡಿ ಉದ್ಘಾಟಿಸಿದರು. ಪಲಿಮಾರಿನ ಯೋಗದೀಪಿಕಾ ಗುರುಕುಲದ ಪ್ರಸಕ್ತ ಮತ್ತು ಹಳೆ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು.Read More
ನಾಲ್ಕು ದಿನಗಳ ಆನ್ ಲೈನ್ ವಾಣಿಜ್ಯ ಉತ್ಸವ ಅಕ್ಟೋಬರ್ 15 ರಂದು ಪ್ರಾರಂಭ ಕನಿಷ್ಟ 300 ವ್ಯವಹಾರಿಕ ಸಂಸ್ಥೆಗಳು ಭಾಗಿಯಾಗಲಿವೆ ಹೆಸರು ನೋಂದಾಯಿಸಲು ಯಾವುದೇ ಶುಲ್ಕ ಇಲ್ಲ 50 ಕ್ಕೂ ಹೆಚ್ಚು ಮಹಿಳಾ ಉದ್ದಿಮೆದಾರರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ. ಮಂಗಳೂರು ಅ 14: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಸಹಿತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣ ಮತ್ತು ಟಿವಿ ವಾಹಿನಿಗಳ ಮೂಲಕ ಪ್ರಚಾರಪಡಿಸುತ್ತಾ ಜಿಎಸ್ ಬಿ ಸಮುದಾಯದ ಪ್ರೀತಿ, ವಿಶ್ವಾಸವನ್ನು […]Read More
ಮಂಗಳೂರು ಅ 14: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದರು ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ಇವರ ಸಹಕಾರದಿಂದ ಅಕ್ಟೋಬರ್ 14 ರಿಂದ 20 ವರೆಗೆ ಪ್ರತಿದಿನ ಸಂಜೆ 4.30 ಕ್ಕೆ ಅಕಾಡೆಮಿ ಸಿರಿಚಾವಡಿಯಲ್ಲಿ ತುಳು ನಾಟಕ ಪರ್ಬ ವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 14: ಲೀಲಾವತಿ ಪೊಸಲಾಯಿ ಸಾರಥ್ಯ ಸಿಂಧೂರ ಕಲಾವಿದರು ಕಾರ್ಲ ಇವರ ‘ಪನೊಡಿತ್ತ್ಂಡ್ ಸಾರಿ’ ಅಕ್ಟೋಬರ್ 15: ರಮೇಶ್ ಎಮ್. ಸಂಗಮ ಕಲಾವಿದರು ಉಜಿರೆ ಇವರ ‘ತೂಯೆರೆ ಬರ್ಪೆರ್’ […]Read More
ಮಂಗಳೂರು ಅ 14: ಪ್ರಸಕ್ತ ಸಾಲಿನಲ್ಲಿ ಆಯಾ ಕಾಲೇಜುಗಳಲ್ಲಿ ಎರಡನೇ ಮುಂದುವರೆದ ಸುತ್ತಿನ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶ ಪಡೆದು ರದ್ದು ಪಡಿಸಿದ ನಂತರ ಲ್ಯಾಟರಲ್ ಎಂಟ್ರಿಯಲ್ಲಿ 2ನೇ ವರ್ಷದ ಡಿಪ್ಲೋಮಾ ಕೋರ್ಸಿಗಳಿಗೆ ಪ್ರವೇಶ ಪಡೆದಿರುವುದರಿಂದ ಉಳಿದ ಸೀಟುಗಳಿಗೆ ಆಫ್-ಲೈನ್ ಮುಖಾಂತರ ಮೆರಿಟ್ ಆಧಾರದ ಮೇಲೆ ರೋಷ್ಟರ್ಗನುಗುಣವಾಗಿ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಆಹ್ವಾನಿಸಿದೆ. ಆಯಾ ಪಾಲಿಟೆಕ್ನಿಕ್ನ ಹಂತದಲ್ಲಿ ಅಕ್ಟೋಬರ್ 15 ರೊಳಗೆ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ […]Read More
ಸುಬ್ರಹ್ಮಣ್ಯ, ಅ 13 : ಶ್ರೀ ವನದುರ್ಗಾ ದೇವಿ ದೇವಸ್ಥಾನದಲ್ಲಿ ಅ 17 ರಿಂದ ಅ 25 ರ ವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಆ ಪ್ರಯುಕ್ತ ಪ್ರತಿ ರಾತ್ರಿ 8.45 ಕ್ಕೆ ರಂಗಪೂಜೆ ಜರಗುವುದು. ದಿನಾಂಕ 26 – ವಿಜಯದಶಮಿಯಂದು 6 ಗಂಟೆಗೆ ಶಮೀ ಪೂಜೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಬಂದು ಶೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸುಬ್ರಹ್ಮಣ್ಯ ಮಠದ ಪ್ರಕಟಣೆ ತಿಳಿಸಿದೆ.Read More
ಮಂಗಳೂರು ಅ13:- ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನುಭರ್ತಿ ಮಾಡುವ ಸಲುವಾಗಿ ಅಕ್ಟೋಬರ್ 18 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಲಿಖಿತ ಪರೀಕ್ಷೆಗಳನ್ನು ಪೂರ್ವ ನಿಗಧಿಯಾಗಿರುವಂತೆ ಮಂಗಳೂರಿನ ಮೇರ್ಲಪದವು ಶ್ರೀನಿವಾಸ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಇಂಜಿನಿಯರಿಂಗ್ ಕಾಲೇಜು, ಮತ್ತು ಅಡ್ಯಾರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮೆನೇಜ್ಮೆಂಟ್ ಇಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ 90 ನಿಮಿಷ ಮುಂಚಿತವಾಗಿ ಹಾಜರಿರುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More
ಮಂಗಳೂರು ಅ13:- ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆಯಿಂದ ನೀಡಲಾಗುತ್ತಿರುವ ಒಟ್ಟು ಆರು ಸೇವೆಗಳಾದ ಮಾಜಿ ಸೈನಿಕರ ಹಾಗೂ ಮೃತ ಮಾಜಿ ಸೈನಿಕರ ಪತ್ನಿಗೆ ಗುರುತಿನ ಚೀಟಿ ವಿತರಿಸುವುದು, ಉದ್ಯೋಗ ನೋಂದಣಿ, ಸಿ.ಇ.ಟಿ ಪ್ರಮಾಣ ಪತ್ರ, ಕನ್ನಡಕ ಅನುದಾನ, ಮದುವೆ ಅನುದಾನ ಹಾಗೂ ಮನೆ ದುರಸ್ಥಿ ಅನುದಾನ (ಯುದ್ಧ ಸಂತ್ರಸ್ಥರ ಪ್ರಕರಣಗಳಿಗೆ) ಸೇವೆಗಳನ್ನು ಕರ್ನಾಟಕ ಸಕಾಲ ಸೇವೆಗಳ ಮುಖಾಂತರ ನೀಡಲು ಸರ್ಕಾರವು ತಿರ್ಮಾನಿಸಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಆನ್ಲೈನ್ ತಂತ್ರಾಂಶ ಸೇವಾ ಸಿಂಧು www.sakala.kar.nic.in ಜಾಲತಾಣದಿಂದ […]Read More
ಮಂಗಳೂರು ಅ 12 : ಮಂಗಳೂರು ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಮೂಲಕ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವುದರಿಂದ ಬೆಳೆ ಮಾಹಿತಿ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಬೆಳೆ ದರ್ಶಕ್ – 2020 ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು, ರೈತರಿಗೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 15 ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ರೈತರು ಬೆಳೆ […]Read More
ಮಂಗಳೂರು ಅ 12 : ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಲೋಕ ಕಲ್ಯಾಣಾರ್ಥ ಶತ ಚಂಡಿಕಾ ಯಾಗವು ಅ 12 ರಿಂದ ಅ 16 ವರೆಗೆ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿದೆ. ಪ್ರಪಂಚಕ್ಕೆ ತಗಲಿರುವ ಮಹಾಮಾರಿಯ ಅಂತ್ಯಕ್ಕಾಗಿ, ಜನರ ಆತಂಕ ನಿವಾರಣೆಗಾಗಿ , ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಹಾಗೂ ಎಲ್ಲಾ ರೀತಿಯ ತೊಂದರೆಗಳ ನಿವಾರಣೆಗಾಗಿ ಶ್ರೀ ಮಹಾಲಕ್ಷ್ಮಿಯ ಪ್ರೀತ್ಯರ್ಥ ಶತ ಚಂಡಿಕಾ ಹವನ ನಡೆಯಲಿರುವುದು. ಶತ ಚಂಡಿಕಾ ಯಾಗದ ಪ್ರಥಮ ದಿನದಂದು […]Read More
