ಕಾರವಾರ, ಅ 15: ಉತ್ತರ ಕನ್ನಡದ ಸೂಪಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟವು ಏರುತ್ತಿರುವುದರಿಂದ ಕೆಳಭಾಗದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಉಸ್ತುವಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಕೇಳಿಕೊಂಡಿದ್ದಾರೆ. ಮೂರನೇ ಮತ್ತು ಅಂತಿಮ ಮುನ್ನೆಚ್ಚರಿಕೆಯನ್ನು ನೀಡಿದ ಅವರು, ಅಕ್ಟೋಬರ್ 15, ಬೆಳಿಗ್ಗೆ 8 ರ ಹೊತ್ತಿಗೆ ಜಲಾಶಯದಲ್ಲಿನ ನೀರಿನ ಮಟ್ಟವು 558.65 ಮೀಟರ್ (ಅಣೆಕಟ್ಟಿನ ಗರಿಷ್ಠ ಮಟ್ಟ 564 ಮೀಟರ್) ತಲುಪಿದೆ ಎಂದು ಹೇಳಿದ್ದಾರೆ. ಒಳಹರಿವು ಹೆಚ್ಚಾದರೆ, ಅಣೆಕಟ್ಟಿನ ನೀರು ಶೀಘ್ರದಲ್ಲೇ ಅದರ ಗರಿಷ್ಠ ಮಟ್ಟವನ್ನು ತಲುಪುತ್ತದೆ. ನೀರು ಗರಿಷ್ಠ […]Read More
ಮಂಗಳೂರು ಅ 14: ಕೇಂದ್ರೀಯ ಉಪನೊಂದಣಿ ಕಚೇರಿ, ಮಂಗಳೂರು ನಗರದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾಪನ ಉಪಸಮಿತಿಯು 2019 ನೇ ಸಾಲಿನಲ್ಲಿ ಹೊಸ ಹಾಗೂ ಹಳೆಯ ಬಿಟ್ಟು ಹೋದ ಅಪಾರ್ಟ್ಮೆಂಟ್ಗಳ ಮಾರುಕಟ್ಟೆ ಮೌಲ್ಯವನ್ನು ನಿಗಧಿಪಡಿಸಿ, ಹಾಗೂ ಅಪಾರ್ಟ್ಮೆಂಟ್ಗಳ ಹೆಸರು ಮತ್ತು ಇದರ ರಸ್ತೆಗಳ ಹೆಸರು ತಿದ್ದುಪಡಿಗೆ ಸಂಬಂಧಪಟ್ಟ ಕಚೇರಿಯಲ್ಲಿ ಸಾರ್ವಜನಿಕ ಆಕ್ಷೇಪಣೆಗಳಿಗಾಗಿ ಈಗಾಗಲೇ ಪ್ರಕಟಿಸಲಾಗಿದೆ. ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ 15 ದಿವಸದೊಳಗೆ ಸಲ್ಲಿಸಬೇಕೆಂದು ಸ್ಥಿರ ಸ್ವತ್ತುಗಳ ಮೌಲ್ಯಮಾಪನ ಉಪಸಮಿತಿ, ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ […]Read More
ಮಂಗಳೂರು ಅ 14: ಮೂಡುಬಿದಿರೆ ತಾಲೂಕು, ಶಿರ್ತಾಡಿ ಗ್ರಾಮದ ಜವಹರ್ಲಾಲ್ ನೆಹರು ಅನುದಾನಿತ ಪ್ರೌಢಶಾಲೆಯ ಶಿಕ್ಷಕಿ ಪದ್ಮಾಕ್ಷಿ ಎನ್ ಇವರ ಆರೋಗ್ಯ ಚಿಕಿತ್ಸೆಯನ್ನು ಸರಕಾರವು ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ನೀಡಿದೆ. ಸೆಪ್ಟೆಂಬರ್ 28 ರಂದು ಕೆಮ್ಮು, ಮೈಕೈನೋವು ಮತ್ತು ಸಣ್ಣ ಜ್ವರದಿಂದ ಬಳಲುತ್ತಿದ್ದರು, ಕೆಮ್ಮಿದಾಗ ಕಫದಲ್ಲಿ ರಕ್ತ ಬಂದಿದ್ದರಿಂದ ಮರುದಿನ ಮೂಡಬಿದ್ರೆಯ ಸ್ಥಳಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿರುತ್ತಾರೆ. ಇದಕ್ಕೆ ಮುಂಚೆ 8-10 ದಿನದಿಂದ ಮೈಕೈನೋವು ಹಾಗೂ ತುಂಬಾ ಸುಸ್ತು ಇರುವುದಾಗಿ ತಿಳಿಸಿರುತ್ತಾರೆ. ಸೆಪ್ಟೆಂಬರ್ 29 ರಂದು […]Read More
ಮಂಗಳೂರು, ಅ 14: ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಯಿತು. ಸರಕಾರಿ ನೌಕರರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಕಂಪ್ಯೂಟರ್ ತರಬೇತಿ ನಡೆಸಲು ಯೋಚಿಸಿದ್ದ ಸಂಘದ ಸ್ವಂತ ಸ್ಥಳದಲ್ಲಿ ಈಗ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯವರು ಅನಧಿಕೃತವಾಗಿ ಅತಿಕ್ರಮಣ ಮಾಡಿ ಹೊಸ ಕಟ್ಟಡ ನಿರ್ಮಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರಕಾರಿ ನೌಕರರು ಪ್ರತಿಭಟಿಸಿದರು. ಪಾಂಡೇಶ್ವರ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರು […]Read More
ಉಡುಪಿ, ಅ 14: ಶ್ರೀಕೃಷ್ಣ ಮಠದಲ್ಲಿ ನಿರಂತರ ಭಜನೆ ಉದ್ಘಾಟನೆಯನ್ನು ಪರ್ಯಾಯ ಅದಮಾರು ಹಿರಿಯ ಮಠಾಧಿಪತಿಗಳಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು,ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹಾಗೂ ಚಿತ್ರಾಪುರ ಮಠಾಧೀಶರಾದ ಶ್ರೀವಿದ್ಯೇಂದ್ರತೀರ್ಥ ಶ್ರೀಪಾದರೊಂದಿಗೆ ದೀಪ ಬೆಳಗಿಸಿ ಮತ್ತು ದಸರಾ ಪದಗಳನ್ನು ಹಾಡಿ ಉದ್ಘಾಟಿಸಿದರು. ಪಲಿಮಾರಿನ ಯೋಗದೀಪಿಕಾ ಗುರುಕುಲದ ಪ್ರಸಕ್ತ ಮತ್ತು ಹಳೆ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು.Read More
ನಾಲ್ಕು ದಿನಗಳ ಆನ್ ಲೈನ್ ವಾಣಿಜ್ಯ ಉತ್ಸವ ಅಕ್ಟೋಬರ್ 15 ರಂದು ಪ್ರಾರಂಭ ಕನಿಷ್ಟ 300 ವ್ಯವಹಾರಿಕ ಸಂಸ್ಥೆಗಳು ಭಾಗಿಯಾಗಲಿವೆ ಹೆಸರು ನೋಂದಾಯಿಸಲು ಯಾವುದೇ ಶುಲ್ಕ ಇಲ್ಲ 50 ಕ್ಕೂ ಹೆಚ್ಚು ಮಹಿಳಾ ಉದ್ದಿಮೆದಾರರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ. ಮಂಗಳೂರು ಅ 14: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಸಹಿತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣ ಮತ್ತು ಟಿವಿ ವಾಹಿನಿಗಳ ಮೂಲಕ ಪ್ರಚಾರಪಡಿಸುತ್ತಾ ಜಿಎಸ್ ಬಿ ಸಮುದಾಯದ ಪ್ರೀತಿ, ವಿಶ್ವಾಸವನ್ನು […]Read More
ಮಂಗಳೂರು ಅ 14: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದರು ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ಇವರ ಸಹಕಾರದಿಂದ ಅಕ್ಟೋಬರ್ 14 ರಿಂದ 20 ವರೆಗೆ ಪ್ರತಿದಿನ ಸಂಜೆ 4.30 ಕ್ಕೆ ಅಕಾಡೆಮಿ ಸಿರಿಚಾವಡಿಯಲ್ಲಿ ತುಳು ನಾಟಕ ಪರ್ಬ ವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 14: ಲೀಲಾವತಿ ಪೊಸಲಾಯಿ ಸಾರಥ್ಯ ಸಿಂಧೂರ ಕಲಾವಿದರು ಕಾರ್ಲ ಇವರ ‘ಪನೊಡಿತ್ತ್ಂಡ್ ಸಾರಿ’ ಅಕ್ಟೋಬರ್ 15: ರಮೇಶ್ ಎಮ್. ಸಂಗಮ ಕಲಾವಿದರು ಉಜಿರೆ ಇವರ ‘ತೂಯೆರೆ ಬರ್ಪೆರ್’ […]Read More
ಮಂಗಳೂರು ಅ 14: ಪ್ರಸಕ್ತ ಸಾಲಿನಲ್ಲಿ ಆಯಾ ಕಾಲೇಜುಗಳಲ್ಲಿ ಎರಡನೇ ಮುಂದುವರೆದ ಸುತ್ತಿನ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶ ಪಡೆದು ರದ್ದು ಪಡಿಸಿದ ನಂತರ ಲ್ಯಾಟರಲ್ ಎಂಟ್ರಿಯಲ್ಲಿ 2ನೇ ವರ್ಷದ ಡಿಪ್ಲೋಮಾ ಕೋರ್ಸಿಗಳಿಗೆ ಪ್ರವೇಶ ಪಡೆದಿರುವುದರಿಂದ ಉಳಿದ ಸೀಟುಗಳಿಗೆ ಆಫ್-ಲೈನ್ ಮುಖಾಂತರ ಮೆರಿಟ್ ಆಧಾರದ ಮೇಲೆ ರೋಷ್ಟರ್ಗನುಗುಣವಾಗಿ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಆಹ್ವಾನಿಸಿದೆ. ಆಯಾ ಪಾಲಿಟೆಕ್ನಿಕ್ನ ಹಂತದಲ್ಲಿ ಅಕ್ಟೋಬರ್ 15 ರೊಳಗೆ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ […]Read More
ಸುಬ್ರಹ್ಮಣ್ಯ, ಅ 13 : ಶ್ರೀ ವನದುರ್ಗಾ ದೇವಿ ದೇವಸ್ಥಾನದಲ್ಲಿ ಅ 17 ರಿಂದ ಅ 25 ರ ವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಆ ಪ್ರಯುಕ್ತ ಪ್ರತಿ ರಾತ್ರಿ 8.45 ಕ್ಕೆ ರಂಗಪೂಜೆ ಜರಗುವುದು. ದಿನಾಂಕ 26 – ವಿಜಯದಶಮಿಯಂದು 6 ಗಂಟೆಗೆ ಶಮೀ ಪೂಜೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಬಂದು ಶೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸುಬ್ರಹ್ಮಣ್ಯ ಮಠದ ಪ್ರಕಟಣೆ ತಿಳಿಸಿದೆ.Read More