ಕಾರವಾರ ರೋಟರಿ ಯಿಂದ ಮಾಸ್ಕ್ ಹಾಗೂ ಹ್ಯಾಂಡ್ ವಾಶ್ ವಿತರಣೆ

 ಕಾರವಾರ ರೋಟರಿ ಯಿಂದ ಮಾಸ್ಕ್ ಹಾಗೂ ಹ್ಯಾಂಡ್ ವಾಶ್ ವಿತರಣೆ
Share this post

ಕಾರವಾರ, ಅ 20: ಕಾರವಾರ ರೋಟರಿ ಸಂಸ್ಥೆಯಿಂದ ಮೀನುಮಾರುಕಟ್ಟೆಯಲ್ಲಿ ಮೀನು ಮಾರುವ ಮಹಿಳೆಯರಿಗೆ ಮಾಸ್ಕ್ ಹಾಗೂ ಹ್ಯಾಂಡ್ ವಾಶ್ ವಿತರಿಸಲಾಯಿತು.

ಮೀನುಮಾರಾಟಗಾರ ಸಂಘದ ಅಧ್ಯಕ್ಷೆ ಶ್ರೀಮತಿ ಸುಶೀಲಾ ಹರಿಕಂತ್ರ ರವರು ಉಪಸ್ಥಿತರಿದ್ದರು.

ಮಾಸ್ಕ್ ಹಾಗೂ ಹ್ಯಾಂಡ್ ವಾಶ್ ಗಳನ್ನು ಸುರೇಶ ನಾಯ್ಕ ರವರು ತಮ್ಮ ಜನ್ಮದಿನದ ಪ್ರಯುಕ್ತ ಪ್ರಾಯೋಜಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸುನೀಲ್ ಸೋನಿ, ಕಾರ್ಯದರ್ಶಿ ಗಣಪತಿ ಬಾಡಕರ, ಸಮುದಾಯ ಸೇವಾ ನಿರ್ದೇಶಕ ಡಾ. ಸಮೀರಕುಮಾರ ನಾಯಕ ,ಸದಸ್ಯರಾದ ಮಿನಿನ ಪುಡ್ತಾಡೊ, ಶೈಲೆಶ ಹಳದಿಪುರ, ಅಮರನಾಥ ಶೆಟ್ಟಿ, ನಾಗರಾಜ ಜೋಶಿ, ರಾಘವೇಂದ್ರ ಜಿ. ಪ್ರಭು, ಮೋಹನ ನಾಯ್ಕ, ರಾಮಚಂದ್ರ ಪಡವಳಕರ, ಗುರುದತ್ತ ಬಂಟ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾಸ್ಕ ಹಾಕದೇ ಇರುವ ಸಾರ್ವಜನಿಕರಿಗೂ ಮಾಸ್ಕ್ ಗಳನ್ನು ವಿತರಿಸಲಾಯಿತು.

Subscribe to our newsletter!

Other related posts

error: Content is protected !!