ಉಡುಪಿ, ಅ 29: ಶ್ರೀಕೃಷ್ಣಮಠದಲ್ಲಿ ಆಶ್ವಯುಜ ಶುಕ್ಲ ತ್ರಯೋದಶಿಯಿಂದ ಕೃಷ್ಣ ಪಂಚಮಿಯವರೆಗೆ ಬಡಗುಮಾಳಿಗೆಯಲ್ಲಿ ನಿರ್ಮಿಸಿದ ಮಂಟಪದಲ್ಲಿ ನಡೆಯುತ್ತಿರುವ ಋಕ್ಸಂಹಿತಾ ಯಾಗ ನಡೆಯುತ್ತಿದೆ. ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಅವಧಾನಿ ವಿದ್ವಾನ್ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಇವರ ನೇತೃತ್ವದಲ್ಲಿ ಮಹಾಪೂಜೆ ನಡೆಯಿತು.Read More
ಪ್ರವಚನ ಮಂಟಪ ಹಾಗೂ ಸಹ್ಯಾದ್ರಿ ವಸತಿ ಗೃಹದಲ್ಲಿ ಸೇವಾ ರಶೀದಿ ವಿತರಿಸುವ ಸ್ವಯಂಚಾಲಿತ ಯಂತ್ರ (KIOSK) ಪ್ರಾರಂಭ ಕಾರ್ಡ್ ಕಾರ್ಡ್, ಯುಪಿಐ ಮೂಲಕ ಸೇವೆಯ ಹಣ ಪಾವತಿ ಧರ್ಮಸ್ಥಳ, ಅ 29: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಳದ ಭಕ್ತರ ಅನುಕೂಲತೆಗಾಗಿ ಕ್ಷೇತ್ರದ ಪ್ರವಚನ ಮಂಟಪ ಹಾಗೂ ಸಹ್ಯಾದ್ರಿ ವಸತಿ ಗೃಹದಲ್ಲಿ ಸೇವಾ ರಶೀದಿ ವಿತರಿಸುವ ಯಂತ್ರ (KIOSK) ಉದ್ಘಾಟಿಸಲಾಯಿತು. ಸೇವಾ ಕೌಂಟರ್ ಎದುರು ಜನಸಂದಣಿ ತಪ್ಪಿಸಲು ಸಹಾಯಮಾಡುವ ಈ ಯಂತ್ರ ವು ಭಕ್ತರಿಗೆ ತ್ವರಿತವಾಗಿ ಸೇವಾ ರಶೀದಿ ಪಡೆಯಲು […]Read More
ಉಡುಪಿ, ಅ 29: ಇಂದು ಬೆಳ್ಳಂಬೆಳಗ್ಗೆ ಮಕ್ಕಳ ರಕ್ಷಣಾ ಘಟಕ ಹಾಗೂ ಇತರ ಇಲಾಖಾ ಅಧಿಕಾರಿಗಳು ಮಲ್ಪೆ ಬಂದರಿನಲ್ಲಿ 17 ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,.ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ .ಪೊಲೀಸ್ ಇಲಾಖೆ .ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹಾಗೂ, ನಾಗರಿಕ ಸೇವಾ ಟ್ರಸ್ಟ್ -ಉಡುಪಿ ಕಾರ್ಯಕರ್ತರು ಗುರುವಾರ ಸುಮಾರು ಐದು ಘಂಟೆ ಸಮಯಕ್ಕೆ ಉಡುಪಿಯ ಮಲ್ಪೆ ಬಂದರಿಗೆ ತೆರಳಿ ಅಲ್ಲಿ ಮೀನು ಆಯುವ 17 ಮಕ್ಕಳನ್ನು ರಕ್ಷಿಸಿದರು. […]Read More
ಮಂಗಳೂರು ಅ 28: ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಲ್ಲಿ ವಾಹನಗಳು ಮತ್ತು ಡ್ರೈವಿಂಗ್ ಲೈಸನ್ಸ್ ಸಂಬಂಧಿತ ಅರ್ಜಿಗಳನ್ನು ಸಲ್ಲಿಸುವಾಗ ಸಾರ್ವಜನಿಕರು ಸಂಬಂಧಿಸಿದ ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನು ಪರಿಶೀಲನೆಗೆ ಕಡ್ಡಾಯವಾಗಿ ಹಾಜರು ಪಡಿಸಬೇಕು ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆನ್ಲೈನ್ ಅರ್ಜಿಗಳನ್ನು ಸಲ್ಲಿಸುವಾಗ ಸಂಬಂಧಪಟ್ಟ ದಾಖಲೆಗಳ ಮೂಲ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಎಂದು ಹೇಳಿದರುRead More
ಮಂಗಳೂರು ಅ 28: ಸರ್ಕಾರದ ಎಲ್ಲಾ ಯೋಜನೆಗಳು ಸಮಾಜದ ಎಲ್ಲಾ ಜನರಿಗೂ ಸಮಾನವಾಗಿ ತಲುಪಬೇಕು, ಈ ನಿಟ್ಟಿನಲ್ಲಿ ಸರ್ಕಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು, ಭ್ರಷ್ಟಾಚಾರ ರಹಿತವಾಗಿ, ಪ್ರಾಮಾಣಿಕವಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಾಗೃತಿ ಅರಿವು ಸಪ್ತಾಹ – 2020 ನ್ನು ಉದ್ದೇಶಿಸಿ […]Read More
ಬೆಂಗಳೂರು, ಅಕ್ಟೋಬರ್ 28: ಕರಾವಳಿ ಜಿಲ್ಲೆಗಳ ಎಂಟು ಮಂದಿ ಸೇರಿದಂತೆ ೬೫ ಸಾಧಕರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕರಾವಳಿ ಕರ್ನಾಟಕದ ಸಾಧಕರುದಕ್ಷಿಣ ಕನ್ನಡ ವಲೇರಿಯನ್ ಡಿಸೋಜ (ವಲ್ಲಿ ವಗ್ಗ) – ಸಾಹಿತ್ಯಕೆ ಲಿಂಗಪ್ಪ ಶೇರಿಗಾರ, ಕಟೀಲ್ – ಸಂಗೀತಕುಸುಮೋದರದೇರಣ್ಣ ಶೆಟ್ಟಿ – ಹೊರನಾಡು ಕನ್ನಡಿಗಧರ್ಮೋತ್ಥಾನ ಟ್ರಸ್ಟ್, ಧರ್ಮಸ್ಥಳ- ಸಂಘ ಸಂಸ್ಥೆ ಉಡುಪಿ:ಎಂ ಕೆ ವಿಜಯಕುಮಾರ್-ನ್ಯಾಯಾಂಗಪ್ರೊ. ಉಡುಪಿ ಶ್ರೀನಿವಾಸ-ವಿಜ್ಞಾನ ಮತ್ತು ತಂತ್ರಜ್ಞಾನಮಣೆಗಾರ್ ಮೀರಾನ್ ಸಾಹೇಬ್ – ಸಮಾಜ ಸೇವೆ ಉತ್ತರ ಕನ್ನಡಎನ್ […]Read More
ಕಾರವಾರ, ಅ 27: ಕರ್ನಾಟಕ ಪಶ್ಚಿಮ ಪದವಿಧರರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಬುಧವಾರ ಮತದಾನ ನಡೆಯಲಿದ್ದು, ಜಿಲ್ಲೆಯ 23 ಸ್ಥಳದ 26 ಮತಗಟ್ಟೆಗಳಲ್ಲಿ ಕೋವಿಡ್-19 ಮುಂಜಾಗ್ರತೆಗಾಗಿ ಸೆಕ್ಟರ್ ಹೆಲ್ತ್ ರೆಗ್ಯುಲೇಟರ್ಗಳನ್ನು ನೇಮಿಸುವದರೊಂದಿಗೆ ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಹೇಳಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೋವಿಡ್ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪ್ರಥಮಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ […]Read More
ಮಂಗಳೂರು ಅ 27: ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997ರ ಕಲಂ(25) ರನ್ವಯ ದ.ಕ. ಜಿಲ್ಲೆಯ ಪ್ರವರ್ಗ ‘ಸಿ’ ಗೆ ಸೇರಿದ ದೇವಸ್ಥಾನ ಹಾಗೂ ದೈವಸ್ಥಾನಗಳ ಪ್ರಸಕ್ತ ಸಾಲಿನ ಜುಲೈ ತಿಂಗಳಿನಲ್ಲಿ ಅವಧಿ ಮುಕ್ತಾಯವಾಗುವ ಸಂಸ್ಥೆಗಳಿಗೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸಲಾಗುತ್ತಿದ್ದು, ಸಮಿತಿಯಲ್ಲಿ ಸದಸ್ಯರಾಗ ಬಯಸುವ ಆಸಕ್ತರಿಂದ ಅರ್ಜಿಗಳನ್ನು ನವೆಂಬರ್ 23 ರೊಳಗೆ ಆಹ್ವಾನಿಸಲಾಗಿದೆ. ದೇವಸ್ಥಾನ ಹಾಗೂ ದೈವಸ್ಥಾನಗಳ ವಿವರ ಇಂತಿವೆ: ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಶ್ರೀ […]Read More
ಮಂಗಳೂರು ಅ 27 : ಮುಸ್ಲಿಂ ಭಾಂದವರು ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯಲ್ಲಿ ಅಕ್ಟೋಬರ್ 29 ರಂದು ಆಚರಿಸುತ್ತಿದ್ದು, ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ26(1)(2)(3) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ: ರಾಜೇಂದ್ರ ಕೆ.ವಿ ಅವರು ಈ ಕೆಳಕಂಡಂತೆ ಮಾರ್ಗಸೂಚಿಗಳನ್ನು ಪಾಲಿಸಲು ಆದೇಶಿಸಿರುತ್ತಾರೆ. ಈದ್ ಮಿಲಾದ್ ಹಬ್ಬವನ್ನು ಆಚರಿಸುವ ಸಮಯದಲ್ಲಿ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ, ತೆರೆದ ಸ್ಥಳಗಳಲ್ಲಿ […]Read More
