ಧರ್ಮಸ್ಥಳದಲ್ಲಿ ಮತ್ಸ್ಯ ಪ್ರದರ್ಶನಾಲಯ ಉದ್ಘಾಟನೆ

 ಧರ್ಮಸ್ಥಳದಲ್ಲಿ ಮತ್ಸ್ಯ ಪ್ರದರ್ಶನಾಲಯ ಉದ್ಘಾಟನೆ
Share this post

ಬೆಳ್ತಂಗಡಿ, ಅ 11: ಧರ್ಮಸ್ಥಳದ ಲಲಿತೋದ್ಯಾನದಲ್ಲಿ ಮತ್ಸ್ಯ ಪ್ರದರ್ಶನಾಲಯವನ್ನು ಮುಜರಾಯಿ ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ ಪ್ರಾಣಿ – ಪಕ್ಷಿಗಳನ್ನು ಪ್ರೀತಿಯಿಂದ ಸಾಕುವುದರಿಂದ ನಮ್ಮ ಮಾನಸಿಕ ಒತ್ತಡಗಳು ದೂರವಾಗುತ್ತವೆ. ಅಲಂಕಾರಿಕ ಮೀನುಗಳನ್ನು ಕೆರೆ, ನದಿ, ಸಮುದ್ರದಲ್ಲಿ ನೋಡಲು ಸಾಧ್ಯವಿಲ್ಲ. ಮೀನು ಸಾಕುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಉದ್ಘಾಟನಾ ಭಾಷಣದಲ್ಲಿ ಸಚಿವರು ತಮ್ಮ ಇಲಾಖೆಯ ಸಾಧನಗಳ ಬಗ್ಗೆ ತಿಳಿಸಿದರು.

Also read: Kasarkod, Padubidri beaches get ‘Blue Flag,’ tag

“ರಾಜ್ಯವು ಒಳನಾಡು ಮೀನುಗಾರಿಕೆಯಲ್ಲಿ ದೇಶದಲ್ಲಿ 9ನೇ ಸ್ಥಾನದಲ್ಲಿ ಹಾಗೂ ಕಡಲ ಮೀನುಗಾರಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಮೂರೂವರೆ ಕೋಟಿ ರೂಪಾಯಿ ಅನುದಾನ ನೀಡಿದ್ದು ಉಳ್ಳಾಲದಿಂದ ಕಾರವಾರ ತನಕ ಕಡಲಕಿನಾರೆಯಲ್ಲಿ ಮೀನು ಸಂಪಾದನೆಗೆ ಆದ್ಯತೆ ನೀಡಲಾಗುವುದು,” ಎಂದು ಹೇಳಿದರು.

ಶಾಸಕರಾದ ಹರೀಶ್ ಪೂಂಜ ಮತ್ತು ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು.ಡಾ. ಬಿ.ಯಶೋವರ್ಮ ಧನ್ಯವಾದವಿತ್ತರು. ಉಪನ್ಯಾಸಕ ದೀಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.

Subscribe to our newsletter!

Other related posts

error: Content is protected !!