ಉಚಿತ ವಿದ್ಯುತ್: ನೋಂದಣಿಗೆ ಸೂಚನೆ
ಮಂಗಳೂರು,ಆ.24, 2022: ಸರ್ಕಾರದ ಅಮೃತ ಜ್ಯೋತಿ ಯೋಜನೆಯಲ್ಲಿ ಘೋಷಿಸಿದಂತೆ ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭಾಗ್ಯಜ್ಯೋತಿ ಕುಟೀರ ಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) 2022ರ ಮೇ.01ರಿಂದ ಅನ್ವಯವಾಗುವಂತೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು.
ಅರ್ಹ ಗ್ರಾಹಕರು ಸುವಿಧ ಪೋರ್ಟಲ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದಾಗಿದೆ ಅಥವಾ ಆಧಾರ್ಕಾರ್ಡ್ ಮತ್ತು ಆಧಾರ್ಕಾರ್ಡ್ನಲ್ಲಿ ನೋಂದಣಿಯಾಗಿರುವ ಮೊಬೈಲ್ನೊಂದಿಗೆ ಸಮೀಪದ ಮೆಸ್ಕಾಂ ಉಪವಿಭಾಗದ ಕಾರ್ಯ ಮತ್ತು ಪಾಲನಾ ಶಾಖೆಯನ್ನು ಭೇಟಿ ಮಾಡಿ ನೋಂದಣಿ ಮಾಡಿಕೊಳ್ಳುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಸುವಿಧ ಪೋರ್ಟಲ್ ಲಿಂಕ್: https://suvidha.karnataka.gov.in/