ಐಟಿಐ ಪ್ರವೇಶಾತಿ ಕುರಿತು
ಕಾರವಾರ. ಸೆ.21, 2025: ಪ್ರಸಕ್ತ ಸಾಲಿನಲ್ಲಿ ಕಾರವಾರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಯಲ್ಲಿ ಬಾಕಿ ಉಳಿದಿರುವ ಸಿಟ್ಗಳಿಗೆ ಆಪ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು. ಅರ್ಜಿಯನ್ನು ಕಾಲೇಜಿನಿಂದ ಪಡೆದು ಭರ್ತಿಮಾಡಿ ಸೆ.30 ರೊಳಗಾಗಿ ಪ್ರವೇಶ ಪಡೆಯಬಹುದು.
ಪ್ರವೇಶಾತಿ ಪಡೆಯುವ ಸಮಯದಲ್ಲಿ ಆಧಾರ್ ನಂಬರ್, ರೇಷನ್ ಕಾರ್ಡ್ ನಂಬರ್ ಇ- ಮೇಲ್, ಮೊಬೈಲ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು, ಇ-ಮೇಲ್ ಮತ್ತು ಮೊಬೈಲ್ ನಂಬರ್ ತರಬೇತಿ ಮುಗಿಸಿ ಪರೀಕ್ಷೆಗೆ ಹಾಜರಾಗುವರೆಗೂ ಬದಲಾಯಿಸದಿರಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ, ಬಾಡ ನಂದನಗದ್ದಾ ಕಾರವಾರ ದೂ.ಸಂ: 9448635044, 7676993526, 8861930372 ನ್ನು ಸಂಪರ್ಕಿಸುವAತೆ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
