ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರು

 ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರು
Share this post

ಮಂಗಳೂರು, ಸೆ.20, 2025: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ನಡೆದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ/ಸ್ನಾತಕೋತ್ತರ ವಿಭಾಗಗಳಲ್ಲಿ ನಡೆದ ಈ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜೇತರ ವಿವರ:

ಪ್ರೌಢಶಾಲೆ ವಿಭಾಗ

  • ಪ್ರಥಮ – ವರ್ಷಿಣಿ, 9ನೇ ತರಗತಿ, ಸರಕಾರಿ ಪ್ರೌಢಶಾಲೆ, ಸಿದ್ಧಕಟ್ಟೆ, ಬಂಟ್ವಾಳ ತಾಲೂಕು
  • ದ್ವಿತೀಯ – ದೀಪಕ್ ಆರ್. 9ನೇ ತರಗತಿ, ಸರಕಾರಿ ಪ್ರೌಢಶಾಲೆ, ಗುತ್ತಿಗಾರು, ಸುಳ್ಯ ತಾಲೂಕು
  • ತೃತೀಯ – ರಮ್ಯ ಎಸ್. ಪೂಜಾರಿ, 9ನೇ ತರಗತಿ, ಜೈನ್ ಪ್ರೌಢಶಾಲೆ, ಮೂಡಬಿದ್ರೆ

ಪದವಿಪೂರ್ವ ವಿಭಾಗ:

  • ಪ್ರಥಮ – ಸುಚಿತ್ರಾ, ದ್ವಿತೀಯ ಪಿ.ಯು.ಸಿ.(ವಿಜ್ಞಾನ) ಸರಕಾರಿ ಪದವಿಪೂರ್ವ ಕಾಲೇಜು, ಬೆಂಜನಪದವು, ಬಂಟ್ವಾಳ ತಾಲೂಕು
  • ದ್ವಿತೀಯ -ಶಾರೋನ್.ಎ. ದ್ವಿತೀಯ ಪಿ.ಯು.ಸಿ.(ಊಇಃಂ) ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು, ಮಡಂತ್ಯಾರು, ಬೆಳ್ತಂಗಡಿ ತಾಲೂಕು
  • ತೃತೀಯ – ಕೆ.ಎಂ. ಫಾತಿಮತ್ ತ್ವೈಬಾ, ದ್ವಿತೀಯ ಪಿ.ಯು.ಸಿ.(ವಾಣಿಜ್ಯ) ಮರ್ಕಝುಲ್ ಹುದಾ ವುಮೆನ್ಸ್ ಪಿ.ಯು. ಕಾಲೇಜು, ಕುಂಬ್ರ, ಪುತ್ತೂರು ತಾಲೂಕು

ಪದವಿ/ಸ್ನಾತಕೋತ್ತರ ವಿಭಾಗ:

  • ಪ್ರಥಮ – ಮೇಘ,  ತೃತೀಯ ಬಿ.ಸಿ.ಎ.  ಡಾ.ಪಿ. ದಯಾನಂದ ಪೈ -ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು
  • ದ್ವಿತೀಯ–ಅಕ್ಷತಾ, ದ್ವಿತೀಯ ಬಿ.ಎ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಕಟ್ಟೆ, ಬಂಟ್ವಾಳ ತಾಲೂಕು
  • ತೃತೀಯ – ಲಿಖಿತಾ, ಪ್ರಥಮ ಬಿ.ಕಾಂ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ತಾಲೂಕು

 ಜಿಲ್ಲಾಡಳಿತ ವತಿಯಿಂದ ಅಕ್ಟೋಬರ್ 2 ರಂದು ಮಂಗಳೂರು ಪುರಭವನ ಮುಂಭಾಗದ ರಾಜಾಜಿ ಉದ್ಯಾನವನದಲ್ಲಿ ನಡೆಯುವ  ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾ ವಾರ್ತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!