ಅರಿವು ಕಾರ್ಯಾಗಾರ

ಉಡುಪಿ, ಜನವರಿ 20, 2025: ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಮತ್ತು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಮಣಿಪಾಲ, ಉಡುಪಿ ರವರ ಸಂಯುಕ್ತಾಶ್ರಯದಲ್ಲಿ ಟ್ರೇಡ್ಸ್ ಫಾರ್ ಎಮ್.ಎಸ್.ಎಮ್.ಇ.ಎಸ್ ಹಾಗೂ ಎನ್‌ವಿರಾರ್ನ್ಮೆಂಟ್ ಆಂಡ್ ಸೋಶಿಯಲ್ ಮ್ಯಾನೇಜ್‌ಮೆಂಟ್ ಸಪೋರ್ಟ್ ಫಾರ್ ಎಮ್.ಎಸ್.ಎಮ್.ಇ.ಎಸ್ ಅಂಡರ್ ರ‍್ಯಾಂಪ್ ಸ್ಕೀಮ್ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವು ಜನವರಿ 23 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಅಸಕ್ತ ಜಿಲ್ಲೆಯ ಉದ್ಯಮಿದಾರರು ಸದರಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ದೂ.ಸಂಖ್ಯೆ: 0820-2575650 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.