ಜು.20 ರಿಂದ ವಿಕಲಚೇತನರಿಗೆ ಸಾಧನ ಸಲಕರಣೆಗೆ ಮೌಲ್ಯಮಾಪನ ಶಿಬಿರ
ಮಂಗಳೂರು,ಜು.12, 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಪುನರ್ವವಸತಿ ಕೇಂದ್ರ, ಗ್ರಾಮೀಣ ಮತ್ತು ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಹಾಗೂ ಸ್ಥಳೀಯ ಇಲಾಖೆ ಮತ್ತು ಸಂಘ ಸಂಸ್ಥೆಗಳ ನೆರವಿನೊಂದಿಗೆ ಅಲಿಂಕೋ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಅಗತ್ಯ ಸಾಧನ ಸಲಕರಣೆಗೆ ಮೌಲ್ಯಮಾಪನ ಶಿಬಿರವನ್ನು ಜುಲೈ 20 ರಿಂದ ಹಮ್ಮಿಕೊಳ್ಳಲಾಗಿದೆ.
ವಿವರ: ಜುಲೈ 20ರಂದು ಮಂಗಳೂರಿನ ಡಿಡಿಆರ್‍ಸಿ ವೆನ್‍ಲಾಕ್ ಆಸ್ಪತ್ರೆ ಹಿಂದೆ, ಜುಲೈ 24 ರಂದು ಪುತ್ತೂರು ಜೈನಭವನ ರಸ್ತೆಯ ರೋಟರಿ ಮನಿಷಾ ಸಭಾಂಗಣ, ಜುಲೈ 25 ರಂದು ಸುಳ್ಯ ತಾಲೂಕು ಪಂಚಾಯತ್ ಕಚೇರಿ, ಜುಲೈ 26 ರಂದು ಬಂಟ್ವಾಳ ಸ್ತ್ರೀ ಶಕ್ತಿ ಭವನ, ಜುಲೈ 29 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.