ಮುಂಡತ್ತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಉದ್ಘಾಟನೆ

 ಮುಂಡತ್ತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಉದ್ಘಾಟನೆ
Share this post

ಬೆಳ್ತಂಗಡಿ, ಜ 08, 2023:

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು, ಉಜಿರೆಯ ಎನ್.ಎಸ್.ಎಸ್‌ ಘಟಕವು ದತ್ತು ಶಾಲೆಯಾದ ಸ.ಹಿ.ಪ್ರಾ. ಶಾಲೆ ಮುಂಡತ್ತೋಡಿ, ಪೆರ್ಲದಲ್ಲಿ ವಿಸ್ತರಣಾ ಹಾಗೂ ಶೈಕ್ಷಣಿಕಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಜ 07 ರಂದು ಹಮ್ಮಿಕೊಂಡಿತ್ತು.

ಕಾರ್ಯಕ್ರಮವನ್ನು ನಿರೂಪಿಸಿದ ಸ್ವಯಂಸೇವಕ ಯಕ್ಷಿತ್‌ ಗಿಡವಾಗಿರುವಾಗಲೇ ಅದನ್ನು ಬೇಕಾದ ರೀತಿಯಲ್ಲಿ ಬಗ್ಗಿಸಿದರೆ ಮುಂದೆ ಅದು ಮರವಾದಾಗ ಸದೃಢವಾಗಿ ಬೆಳೆಯುತ್ತದೆ. ಹಾಗೇ ಮಕ್ಕಳಿಗೆ ಈಗಿನಿಂದಲೇ ಮನಸ್ಸಿನಲ್ಲಿ ಮೌಲ್ಯಗಳನ್ನು ತುಂಬಿದರೆ, ಮುಂದೆ ಅವರು ದೇಶದ ಸಂಪತ್ತು ಆಗುವುದರಲ್ಲಿ ಸಂದೇಹವಿಲ್ಲ ಎಂದರು. 

ಶಾಲಾ ಮುಖ್ಯೋಪಾಧ್ಯಾಯ ರಮೇಶ್‌ ಕಾರ್ಯಕ್ರಮ ಉದ್ಘಾಟಿಸಿದರು.

“ಸ್ವಯಂಸೇವಕರು ತಮ್ಮ ಸೇವೆಯಿಂದ ಇತರರಲ್ಲಿಯೂ ಸೇವಾಭಾವನೆ ಮೂಡಿಸುತ್ತಾರೆ. ಅವರೊಂದಿಗೆ ಕೈ ಜೋಡಿಸುವುದು ನಮ್ಮ ಧರ್ಮ. ಮಕ್ಕಳ ಮನಸ್ಸಲ್ಲಿ ನಾವು ಏನು ತುಂಬುತ್ತೇವೋ ಅದೇ ಗಟ್ಟಿಯಾಗಿರುತ್ತವೆ. ಆದ್ದರಿಂದ ಸಾವಧಾನ ಚಿತ್ತದಿಂದ ನಾವು ಜಾಗೃತರಾಗಿ ಅವರಿಗೆ ಹೇಳಿಕೊಡಬೇಕು” ಎಂದರು.

ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ರೇವತಿ ಮುಖ್ಯ ಅತಿಥಿಯಾಗಿ ಮಾತನಾಡಿ ಕಾಲೇಜಿನಿಂದ ಅಣ್ಣ ಅಕ್ಕಂದಿರು ಬರುತ್ತಾರೆ ಎನ್ನುವಾಗಲೇ ಮಕ್ಕಳಿಗೆ ಎಲ್ಲಿಲ್ಲದ ಆಸಕ್ತಿ ಬರುತ್ತದೆ. ಶಿಕ್ಷಕರಿಗಿಂತ ವಿದ್ಯಾರ್ಥಿಗಳೇ ಕಲಿಸುವಾಗ ಮಕ್ಕಳು ಹೆಚ್ಚು ಕುತೂಹಲದಿಂದ ಆಲಿಸುತ್ತಾರೆ ಎಂದರು. 

ಈ ಸಂದರ್ಭದಲ್ಲಿ ಎನ್.ಎಸ್.ಎಸ್‌ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್‌, ಹಾಗೂ ದೀಪಾ ಆರ್.‌ ಪಿ, ಶಾಲಾ ಶಿಕ್ಷಕಿ ಲೀಲಾ, ಪವಿತ್ರಾ ಉಪಸ್ಥಿತರಿದ್ದರು. 

ಸ್ವಯಂಸೇವಕರಾದ ಅಭಿಷೇಕ್, ವಿಘ್ನೇಶ್‌, ಅಂಜನಾ ಕೆ. ರಾವ್‌ ಪ್ರಾರ್ಥಿಸಿದರು. ಸ್ವಯಂಸೇವಕ ಸುಬ್ರಹ್ಮಣ್ಯ ಸ್ವಾಗತಿಸಿ, ತ್ರಿಶೂಲ್ ವಂದಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!