ಎಸ್.ಡಿ.ಎಂ ಮನಶಾಸ್ತ್ರ ವಿಭಾಗದಲ್ಲಿ ಬಿತ್ತಿಚಿತ್ರ ಪ್ರದರ್ಶನ

 ಎಸ್.ಡಿ.ಎಂ ಮನಶಾಸ್ತ್ರ ವಿಭಾಗದಲ್ಲಿ ಬಿತ್ತಿಚಿತ್ರ ಪ್ರದರ್ಶನ
Share this post

ಉಜಿರೆ, ಡಿ 24, 2022: ಪ್ರತಿಯೊಬ್ಬನಿಗೂ ಮನಶ್ಶಾಸ್ತ್ರ ತುಂಬಾ ಅವಶ್ಯಕವಾಗಿದೆ ಮಾನಸಿಕ ಆರೋಗ್ಯ ಕೂಡ ಇಂದಿನ ದಿನಗಳಲ್ಲಿ ಅತೀ ಮುಖ್ಯ . ಇಂತಹ ಸಂಧರ್ಭಗಳಲ್ಲಿ  ಮಾನಸಿಕ ಸುವ್ಯವಸ್ಥೆಯ ಬಗ್ಗೆ ಹಾಗೂ ಮಾನಸಿಕ ವೈಕಲ್ಯಗಳ  ಬಗ್ಗೆ ಜಾಗ್ರತಿ ಮೂಡಿಸುವ ಬಿತ್ತಿ ಚಿತ್ರಗಳು ಒಂದು ಒಳ್ಳೆಯ ಕೆಲಸವಾಗಿದೆ ಎಂದು ಎಸ್.ಡಿ.ಎಂ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದ ಕುಮಾರಿ ಶ್ಲಾಘಿಸಿದರು.

ಉಜಿರೆಯ ಶ್ರೀ ಧ.ಮ ಕಾಲೇಜಿನ ಮನಶ್ಶಾಸ್ತ್ರ ವಿಭಾಗವು ವಿಶ್ವ ಅಂಗವೈಕಲ್ಯ  ದಿನದ  ಅಂಗವಾಗಿ ಹಮ್ಮಿಕೊಂಡಿದ್ದ ಬಿತ್ತಿ ಚಿತ್ರ ಪ್ರದರ್ಶನದಲ್ಲಿ ಮಾತನಾಡುತ್ತಿದ್ದರು. 

ವಿದ್ಯಾರ್ಥಿಗಳು ತಯಾರಿಸಿದ ಒಟ್ಟು 40 ಪೋಸ್ಟರ್’ಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು . ಎಸ್.ಡಿ.ಎಂ ಬಿ.ಎಡ್ ,  ಪ್ರೌಢಶಾಲೆ , ಡಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು  ಪ್ರದರ್ಶನವನ್ನು ವೀಕ್ಷಿಸಿದರು. ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ , ಪ್ರಾದ್ಯಾಪಕ ಡಾ. ಸುಧೀರ್ ಕೆ.ವಿ, ಆತ್ಮಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಹರ್ಷಿತಾ ಶೆನೈ ನಿರೂಪಿಸಿದರು. ಜ್ಯೊತಿಕ ಪಿ.ರೈ ಸ್ವಾಗತಿಸಿದರು ಮತ್ತು ತೇಜಸ್ವಿನಿ ಕೋಟ್ಯಾನ್ ವಂದಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!