ಎನ್.ಎಸ್.ಎಸ್ ಎಂದರೆ ನಿಸ್ವಾರ್ಥ ಸೇವಾ ಯೋಜನೆ: ಅನಿಲ್ ಕುಮಾರ್

 ಎನ್.ಎಸ್.ಎಸ್ ಎಂದರೆ ನಿಸ್ವಾರ್ಥ ಸೇವಾ ಯೋಜನೆ: ಅನಿಲ್ ಕುಮಾರ್
Share this post

ಉಜಿರೆ ನ. 16, 2022: ವಿದ್ಯಾರ್ಥಿಗಳು ಜೀವನದಲ್ಲಿ ಬಂದ ಅವಕಾಶಗಳನ್ನು ಚಿಕ್ಕದು ದೊಡ್ಡದೆಂದು ನೋಡದೆ ಬಂದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಎನ್.ಎಸ್.ಎಸ್ ಎಂದರೆ ನಿಸ್ವಾರ್ಥ ಸೇವಾ ಯೋಜನೆ. ಅದರಿಂದ ಸಿಗುವ ವ್ಯಕ್ತಿತ್ವ ವಿಕಸನ ಕೌಶಲ್ಯಗಳು ನಮ್ಮ ಮುಂದಿನ ಜೀವನದಲ್ಲಿ ಉಪಯೋಗಕ್ಕೆ ಬರುತ್ತವೆ. ಇಂಥ ಪ್ರಯೋಜನಕಾರಿ ಎನ್.ಎಸ್.ಎಸ್ ನ ಸ್ಥಾಪಕರಾದ ಡಾ. ವಿ.ಕೆ.ಆರ್.ವಿ. ರಾವ್ ಅವರನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕೆಂದು ಎನ್ಎಸ್ಎಸ್ ಸಲಹಾ ಸಮಿತಿಯ ಸದಸ್ಯ, ಸಂಪೂರ್ಣ ಟೆಕ್ಸ್ ಟೈಲ್ಸ್ ನ ಮಾಲೀಕ ಅನಿಲ್ ಕುಮಾರ್ ಹೇಳಿದರು.

ಉಜಿರೆ ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2022-23 ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ, ಸ್ವಯಂಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಂತರ ನಡೆದ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್.ಡಿ.ಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಮತಿ ಆಶಾ ಕಿರಣ್ ರಾಷ್ಟ್ರೀಯ ಸೇವಾ ಯೋಜನೆಯ ಇತಿಹಾಸ, ಉಪಯೋಗ, ಉದ್ದೇಶ, ಲಾಭಗಳು, ಎನ್ಎಸ್ಎಸ್ ಸ್ವಯಂಸೇವಕರ ಜವಾಬ್ದಾರಿ, ಎನ್.ಎಸ್.ಎಸ್ ನ ಅವಕಾಶಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಪಿ.ಎನ್ .ಉದಯಚಂದ್ರ ಯೋಜನೆಯ ಭಿತ್ತಿಪತ್ರವನ್ನು ಅನಾವರಣಗೊಳಿಸಿ, ವಿದ್ಯಾರ್ಥಿಗಳಿಗೆ ತರಗತಿಯ ನಾಲ್ಕು ಗೋಡೆಗಳೇ ಪ್ರಪಂಚವಾಗಿರಬಾರದು. ಅವಕಾಶಗಳು ಮಳೆ ಹನಿಯ ಹಾಗೆ ನಿರಂತರವಾಗಿ ಬರುತಿರುತ್ತವೆ, ಅವುಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದರು.

ಬಿಡುವಿನಲ್ಲಿ ಓದುವ ಹವ್ಯಾಸ ಮತ್ತು ವಿಷಯ ನಮ್ಮ ಅಧ್ಯಯನಕ್ಕೆ ಪೂರಕವಾಗಿರಬೇಕೆಂದು ಹೇಳಿದರು.

ಎನ್.ಎಸ್ .ಎಸ್ ನ ಪ್ರಸ್ತುತ ಸಾಲಿನ ನಾಯಕಿಯಾದ ಕುಮಾರಿ ಸ್ಪಂದನಾ ಕಳೆದ ವರ್ಷದ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ನಂತರ ಹಿರಿಯ ನಾಯಕರಾದ ಕೃಷ್ಣರಾಜ ಮತ್ತು ವಸುಮತಿ ಈಗಿನ ನಾಯಕರಿಗೆ ಅಧಿಕಾರ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಡಾ.ಲಕ್ಷ್ಮೀನಾರಾಯಣ.ಕೆ.ಎಸ್ ಹಾಗೂ ದೀಪಾ ಆರ್. ಪಿ ಉಪಸ್ಥಿತರಿದ್ದರು.

ಸ್ವಯಸೇವಕರಾದ ಅಭಿಷೇಕ್, ವಿಘ್ನೇಶ್, ಅಂಜನಾ ಕೆ ರಾವ್ ಪ್ರಾರ್ಥಿಸಿದರು. ಡಾ. ಲಕ್ಷ್ಮೀನಾರಾಯಣ ಕೆ ಎಸ್ ಸ್ವಾಗತಿಸಿ, ಶ್ರೀಮತಿ ದೀಪಾ ಆರ್ ಪಿ ವಂದಿಸಿ, ಸ್ವಯಂಸೇವಕಿ ರಿಯಾ ಲವಿಟಾ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!