ಗರೀಬ್ ಕಲ್ಯಾಣ್ ಅನ್ನ ಯೋಜನೆ: ಮೂರು ತಿಂಗಳು ವಿಸ್ತರಣೆ
ಮಂಗಳೂರು,ಅ. 17, 2022: ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಿ.ಎಂ.ಜಿ.ಕೆ.ಎ.ವೈ (ಪ್ರಧಾನ ಮಂತ್ರಿ ಗರೀಭ್ ಕಲ್ಯಾಣ್ ಅನ್ನ ಯೋಜನಾ) ಯೋಜನೆಯನ್ನು 2022ರ ಅಕ್ಟೋಬರ್ ತಿಂಗಳಿನಿಂದ ಮುಂದಿನ ಮೂರು ತಿಂಗಳು ವಿಸ್ತರಿಸಲಾಗಿದ್ದು, ಜಿಲ್ಲೆಯ ಪಡಿತರ ಚೀಟಿದಾರರು ಆಹಾರ ಧಾನ್ಯಗಳನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದುಕೊಳ್ಳಬಹುದು.
ವಿತರಣಾ ಪ್ರಮಾಣ ಮತ್ತು ದರ ಇಂತಿದೆ:
ಅಂತ್ಯೋದಯ ಅನ್ನ ಯೋಜನೆ (ಎ.ಎ.ವೈ) ಪಡಿತರ ಚೀಟಿಗಳಿಗೆ ಎನ್.ಎಫ್.ಎಸ್.ಎ ಅಡಿಯಲ್ಲಿ ಪ್ರತೀ ಪಡಿತರ ಚೀಟಿಗೆ 35ಕೆ.ಜಿ ಅಕ್ಕಿ ಹಾಗೂ ಪಿ.ಎಂ.ಜಿ.ಕೆ.ಎ.ವೈ ರಡಿ 5 ಕೆ.ಜಿ ಪ್ರತೀ ಸದಸ್ಯನಿಗೆ ಉಚಿತ.
ಆದ್ಯತಾ (ಪಿ.ಎಚ್.ಎಚ್) ಪಡಿತರ ಚೀಟಿಗಳಿಗೆ ಎನ್.ಎಫ್.ಎಸ್.ಎ ಅಡಿಯಲ್ಲಿ ಪ್ರತೀ ಸದಸ್ಯನಿಗೆ 5ಕೆ.ಜಿ ಅಕ್ಕಿ ಹಾಗೂ ಪಿ.ಎಂ.ಜಿ.ಕೆ.ಎ.ವೈ ರಡಿ 5ಕೆ.ಜಿ ಪ್ರತೀ ಸದಸ್ಯನಿಗೆ ಉಚಿತ.
ಆದ್ಯತೇತರ(ಎನ್.ಪಿ.ಎಚ್.ಎಚ್) ಪಡಿತರ ಚೀಟಿಗೆ ಪ್ರತೀ ಕೆ.ಜಿಗೆ 15ರೂ.ಗಳಂತೆ ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಹಾಗೂ ಬಹು ಸದಸ್ಯ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.