ಪಡಿತರ ಚೀಟಿ: ಇ-ಕೆವೈಸಿ ಮಾಡಲು ಅಂತಿಮ ಅವಕಾಶ

 ಪಡಿತರ ಚೀಟಿ: ಇ-ಕೆವೈಸಿ ಮಾಡಲು ಅಂತಿಮ ಅವಕಾಶ
Share this post

ಕಾರವಾರ, ಆ 01, 2021: ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೆ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಇ-ಕೆವೈಸಿಯನ್ನು ಮಾಡಿಸಿಕೊಳ್ಳಲು ಅಂತಿಮ ಕಾಲವಕಾಶ ನೀಡಲಾಗಿದೆ.

2021 ರ ಆಗಸ್ಟ್ ತಿಂಗಳಲ್ಲಿ ಇ-ಕೆವೈಸಿ ಮಾಡಲು ಕೊನೆಯ ಅವಕಾಶ ನೀಡಲಾಗಿದ್ದು ನ್ಯಾಯಬೆಲೆ ಅಂಗಡಿಗಳಲ್ಲಿ ಅಗಸ್ಟ್ 1ರಿಂದ 10ರ ವರೆಗೆ ಇ-ಕೆವೈಸಿಯನ್ನು ಮಾಡಲಾಗುವುದು. ನಂತರ ಇ-ಕೆವೈಸಿ ಮಾಡದೇ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುವುದು.

ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಅಥವಾ ದೂರುಗಳಿದ್ದಲ್ಲಿ ಮತ್ತು ಇತರೆ ಮಾಹಿತಿಗೆ ಸಂಬಂಧಪಟ್ಟಂತೆ ಆಯಾ ತಾಲೂಕು ತಹಶೀಲ್ದಾರರು ಮತ್ತು ಜಿಲ್ಲಾ ಆಹಾರ & ನಾಗರಿಕ ಸರಬರಾಜು ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ಆಹಾರ & ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಆಹಾರ & ನಾಗರಿಕ ಸರಬರಾಜು ಇಲಾಖೆ ಕಾರವಾರ ಕಚೇರಿ ದೂರವಾಣಿ ಸಂಖ್ಯೆ 08382-226464.
  • ಕಾರವಾರ ತಹಶೀಲ್ದಾರ ಕಚೇರಿ 9448609712, 08382-226331,
  • ಅಂಕೋಲಾ ತಹಶೀಲ್ದಾರ ಕಚೇರಿ, 9845397078 08388-230243
  • ಕುಮಟಾ 9481557642, 08386-222054
  • ಹೊನ್ನಾವರ 9980135812, 08387-220262
  • ಭಟ್ಕಳ 8105180342, 08385-226422
  • ಶಿರಸಿ 9739717754, 08384-226383
  • ಸಿದ್ದಾಪುರ 8861641607, 08389-230127
  • ಯಲ್ಲಾಪುರ 8867113551, 08419-261129
  • ಮುಂಡಗೋಡ 9448893878, 08301-222122
  • ಹಳಿಯಾಳ 7483441715, 08284-220134
  • ದಾಂಡೇಲಿ 7676781182
  • ಜೋಯಿಡಾ 9448825842, 08383-282723

Subscribe to our newsletter!

Other related posts

error: Content is protected !!