ಎಸ್.ಡಿ.ಎಂ ಕಾಲೇಜಿನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಉಪನ್ಯಾಸ ಸರಣಿ ಸಂಪನ್ನ

 ಎಸ್.ಡಿ.ಎಂ ಕಾಲೇಜಿನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಉಪನ್ಯಾಸ ಸರಣಿ ಸಂಪನ್ನ
Share this post

ಉಜಿರೆ, ಆ 16, 2022: “ಎಷ್ಟು ದಿನಗಳ ಕಾಲ ನಾವು ಬದುಕಿದ್ದೇವೆ ಎಂಬುದಕ್ಕಿಂತ ಬದುಕಿದ ದಿನದಲ್ಲಿ ಏನು ಸಾಧಿಸಿದ್ದೇವೆ ಎಂಬುದು ಮುಖ್ಯವೆಂದು ತೋರಿಸಿಕೊಟ್ಟವರು ಲೋಹಿಯಾ” ಎಂದು  ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಎನ್ಎಸ್ಎಸ್ ಸ್ವಯಂ ಸೇವಕ ಧನುಷ್ ಕೆ.ಪಿ ಹೇಳಿದರು.  

ಉಜಿರೆ ಶ್ರೀ. ಧ. ಮಂ. ಕಾಲೇಜಿನ ಎನ್ಎಸ್ಎಸ್ ಘಟಕವು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ 75 ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತೀಯ ಸಾಧಕರ ಕುರಿತ ಉಪನ್ಯಾಸ ಸರಣಿ  ಕಾರ್ಯಕ್ರಮದ 75ನೇ ಉಪನ್ಯಾಸ ಸರಣಿಯಲ್ಲಿ ಪಂಡಿತ್ ರಾಮ್ ಮನೋಹರ್ ಲೋಹಿಯಾ ಕುರಿತು ಅವರು ಮಾತನಾಡುತ್ತಿದ್ದರು.

ಜನರನ್ನು ಭಾಷಣದ ಮೂಲಕ ಹುರಿದುಂಬಿಸಿ ಭಾರತೀಯತೆಯನ್ನು ಜಾಗೃತಗೊಳಿಸಿ, ಎಚ್ಚರಿಸಿದ ಹೋರಾಟಗಾರ, ಹಲವು ಭಾಷೆಗಳ ಪಾಂಡಿತ್ಯ ಹೊಂದುವ ಜೊತೆಗೆ ತರ್ಕ ಬದ್ಧ ಆಲೋಚನೆಗಳಿಗೆ, ತರ್ಕ ಬದ್ಧ ಮಾತುಗಳಿಗೆ  ಹೆಸರಾದವರು ಲೋಹಿಯಾ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸ್ವಯಂ ಸೇವಕ, ಭಾರತದ ಏರ್ ಫೋರ್ಸ್ ನಲ್ಲಿ ಏರ್ ಮೆನ್ ಆಗಿ ಸೇವೆ ಸಲ್ಲಿಸುತ್ತಿರುವ ಸೂರಜ್ ಮಡಿವಾಳ್ ಮಾತನಾಡಿ ಎಲ್ಲರ ಸಮಯವೂ ಒಂದೇ ಅವಧಿಯನ್ನು ಹೊಂದಿರುತ್ತದೆ, ಆದರೆ ನಾವು ಆ‌ ಸಮಯವನ್ನೇ ಸದ್ವಿನಿಯೋಗಗೊಳಿಸಿಕೊಳ್ಳುವ ದಾರಿ ಕಂಡುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಎನ್  ಉದಯಚಂದ್ರ ಮಾತನಾಡಿ 75 ಸಾಧಕರ ಕುರಿತ ಯಶಸ್ವಿ ಉಪನ್ಯಾಸ  ಸರಣಿಗೆ  ಪ್ರಶಂಸೆ ವ್ಯಕ್ತಪಡಿಸಿದರು. 

ಕಳೆದ ವರ್ಷ ಅಕ್ಟೋಬರ್ ನಲ್ಲಿ ಶುರುವಾದ ಈ  75 ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತೀಯ ಸಾಧಕರ ಕುರಿತ ಉಪನ್ಯಾಸ  ಸರಣಿ ಕಾರ್ಯಕ್ರಮ ಸೋಮವಾರ ಹಾಗೂ ಶುಕ್ರವಾರ  ಸತತವಾಗಿ ನಡೆಯುತ್ತಾ ಬಂದಿದ್ದು ಗೂಗಲ್ ಮೀಟ್ ಆನ್ಲೈನ್ ಮಾಧ್ಯಮದ ಮೂಲಕ ಪ್ರತಿ ಸೋಮವಾರ ಹಾಗೂ ಶುಕ್ರವಾರ ರಾತ್ರಿ 8 ಫಂಟೆಗೆ ಜರುಗುತ್ತಿತ್ತು. 

ಎನ್ಎಸ್ಎಸ್ ನ ಸ್ವಯಂಸೇವಕರು ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಕಾಲೇಜಿನ ಉಪನ್ಯಾಸಕರು  ಅತಿಥಿಯಾಗಿ ಭಾಗವಹಿಸುತ್ತಿದ್ದ ಈ ಕಾರ್ಯಕ್ರಮದ 75 ನೇ ಕಾರ್ಯಕ್ರಮ  ಇದಾಗಿದ್ದು 75 ಸಂಪನ್ಮೂಲ ವ್ಯಕ್ತಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಎನ್ಎಸ್ಎಸ್ ಸ್ವಾತಂತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಹಲವು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎನ್. ಎಸ್.ಎಸ್. ನ ಯೋಜನಾಧಿಕಾರಿ ಡಾ. ಲಕ್ಷ್ಮಿ ನಾರಾಯಣ ಕೆ. ಎಸ್ ಹಾಗೂ ದೀಪಾ ಆರ್. ಪಿ., ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. 

ಡಾ. ಲಕ್ಷ್ಮಿ ನಾರಾಯಣ ಕೆ. ಎಸ್.  ಸ್ವಾಗತಿಸಿ, ಸ್ವಯಂಸೇವಕಿ ಪ್ರಿನ್ಸಿಯಾ ಫೆರ್ನಾಂಡಿಸ್ ವಂದಿಸಿದರು.  ಅಭಿಷೇಕ್, ವಸುಮತಿ, ವಿಘ್ನೇಶ್, ವರ್ಷಿತಾ  ಪ್ರಾರ್ಥಿಸಿದರು. ಕಲಾನ್ವಿತ ಜೈನ್ ಕಾರ್ಯಕ್ರಮ ನಿರೂಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!