ಭಾಷಾ ಸಾಹಿತ್ಯ ಬೆಳವಣಿಗೆಗೆ ಅನುವಾದ ಅನಿವಾರ್ಯ: ಡಾ.ಸುಧಾರಾಣಿ

 ಭಾಷಾ ಸಾಹಿತ್ಯ ಬೆಳವಣಿಗೆಗೆ ಅನುವಾದ ಅನಿವಾರ್ಯ: ಡಾ.ಸುಧಾರಾಣಿ
Share this post

ಮಂಗಳೂರು ಜು. 19, 2022: ಯಾವುದೇ ಭಾಷೆ ಅನುವಾದ ಸಾಹಿತ್ಯದಿಂದ ಹೊರತಾಗಿಲ್ಲ. ಅನುವಾದ ಸಾಹಿತ್ಯವು ಒಟ್ಟು ಸಾಹಿತ್ಯ ಬೆಳವಣಿಗೆಗೆ ಅಗತ್ಯವಾಗಿದೆ ಎಂದು ಆಳ್ವಾಸ್ ವಿದ್ಯಾಸಂಸ್ಥೆಯ ಕನ್ನಡ ಉಪನ್ಯಾಸಕಿ ಡಾ.ಸುಧಾರಾಣಿ ಹೇಳಿದರು.

ಅವರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹಯೋಗದಲ್ಲಿ ನಡೆದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಬೇತೆ ಬಾಸೆಲೆಗ್ ಅನುವಾದ ಆಯಿನ ತುಳು ಸಾಹಿತ್ಯೊಲು’ ಎಂಬ ವಿಷಯದ ಕುರಿತು ಮಾತನಾಡಿದರು.

ತುಳು ಸಾಹಿತ್ಯದ ಬೆಳವಣಿಗೆಯನ್ನು ವಸಾಹತು ಪೂರ್ವ, ವಸಾಹತು ಕಾಲಘಟ್ಟ ಮತ್ತು ಆಧುನಿಕ ಸಾಹಿತ್ಯ ಎಂದು ಗುರುತಿಸಬಹುದಾಗಿದ್ದು , 20ನೇ ಶತಮಾನದ ಕೊನೆಯಲ್ಲಿ ವೇಗವನ್ನು ಪಡೆಯಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಹಾಗೂ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾದ ಡಾ. ಮಾಧವ ಎಂ.ಕೆ, ಭಾಷೆಯ ಬರವಣಿಗೆಯ ನೆಲೆಯಲ್ಲಿ ಅನುವಾದ ಸಾಹಿತ್ಯದ ಮಹತ್ವ ಹಿರಿದಾದುದು. ಅನುವಾದವೆನ್ನುವುದು ಒಂದು ಸಾಹಿತ್ಯ ಕೃತಿಯ ಸೃಜನಶೀಲ ಮರುಸೃಷ್ಟಿಯಾಗಿದೆ. ಭಾಷಾಂತರ -ಅನುವಾದಗಳು ಭಾಷೆಯ ವಾಹಿನಿಯನ್ನು ವಿಸ್ತರಿಸುವುದಲ್ಲದೆ ಭಾಷಿಕವಾಗಿ ಸಾಹಿತ್ಯಿಕವಾಗಿ ಒಟ್ಟಿನಲ್ಲಿ ಸಮಗ್ರ ವ್ಯಕ್ತಿತ್ವ ವಿಕಸನದಲ್ಲೂ ಪ್ರಮುಖ ಪಾತ್ರ ವಹಿಸಿದೆ ಎಂದರು.

ವಿಭಾಗದ ಉಪನ್ಯಾಸಕರಾದ ಡಾ.ವಿನೋದ, ಪ್ರಶಾಂತಿ ಶೆಟ್ಟಿ ಇರುವೈಲು, ವೇದಸ್ಮಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಂಧ್ಯಾ ಆಳ್ವ ನಿರೂಪಿಸಿದರು. ಸುರೇಶ್ ರಾವ್ ಪ್ರಾರ್ಥಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!