ಪ್ರಾಕೃತಿಕ ವಿಕೋಪ ಸಮಸ್ಯೆ ಕುರಿತು ಜಿಲ್ಲಾಡಳಿತದ ವಾಟ್ಸ್ಆಪ್ ಸಂಖ್ಯೆಗೆ ಮಾಹಿತಿ ನೀಡಿ

 ಪ್ರಾಕೃತಿಕ ವಿಕೋಪ ಸಮಸ್ಯೆ ಕುರಿತು ಜಿಲ್ಲಾಡಳಿತದ ವಾಟ್ಸ್ಆಪ್ ಸಂಖ್ಯೆಗೆ ಮಾಹಿತಿ ನೀಡಿ
Share this post

ಉಡುಪಿ, ಜುಲೈ 15, 2022: ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ ಉಂಟಾಗುವ ನೆರೆ ಪ್ರವಾಹ, ಮನೆ ಹಾನಿ, ಮೂಲಭೂತ ಸೌಕರ್ಯಗಳ ಹಾನಿ ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ಛಾಯಾಚಿತ್ರದೊಂದಿಗೆ ಜಿಲ್ಲಾಡಳಿತದ ಗಮನಕ್ಕೆ ತಂದು, ಕ್ಷಿಪ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತವು ದೂರವಾಣಿ ಸಂಖ್ಯೆಯೊಂದಿಗೆ ವಾಟ್ಸ್ಅಪ್ ಸಂಖ್ಯೆಯನ್ನು 9880831516 ಆರಂಭಗೊಳಿಸಿದೆ.

ಇದರ ಸದುಪಯೋಗವನ್ನು ಪಡೆಯುವುದರೊಂದಿಗೆ ಮಾನ್ಸೂನ್ ಸಂಧರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಕಾರ್ಯಕೈಗೊಳ್ಳಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                               

ಸಾರ್ವಜನಿಕರು ವಾಟ್ಸ್ಅಪ್ ಮೂಲಕ ಯಾವುದೇ ಸಮಸ್ಯೆಗಳಿಗೆ ಸಂಬAಧಿಸಿದ ವೀಡಿಯೋ, ಛಾಯಾಚಿತ್ರಗಳನ್ನು ಕಳುಹಿಸುವ ಸಂಧರ್ಭದಲ್ಲಿ ಸೂಕ್ತ ಜಿ.ಪಿ.ಎಸ್ ನೊಂದಿಗಿನ ಛಾಯಾಚಿತ್ರ/ ವೀಡಿಯೋ, ಘಟನೆ ನಡೆದ ಸ್ಧಳದ ಖಚಿತ ಮಾಹಿತಿ, ದಿನಾಂಕ ಹಾಗೂ ಸಮಯದೊಂದಿಗೆ, ಘಟಿಸಿರುವ ಸಮಸ್ಯೆಗಳ ಬಗ್ಗೆ ಚುಟುಕಾದ ವಿವರ ಹಾಗೂ ಯಾವ ಇಲಾಖೆಗಳಿಂದ, ಕ್ರಮ ಕೈಗೊಳ್ಳಬೇಕಾಗಿರುತ್ತದೆ ಎಂಬ ಮಾಹಿತಿಯನ್ನು ನಮೂದಿಸಿದ್ದಲ್ಲಿ ತಿಳಿಸಿರುವ ಸಮಸ್ಯೆಗಳ ಕುರಿತು, ವಿಳಂಬರಹಿತವಾಗಿ ಜರೂರಾದ ಕ್ರಮವಹಿಸಲು ಸಾಧ್ಯವಾಗುತ್ತದೆ.

ಪ್ರಸ್ತುತ ಮಳೆಗಾಲದ ಸಂಧರ್ಭದಲ್ಲಿ ಸಂಭವಿಸಬಹುದಾದ ಅವಘಡಗಳು, ಸಾರ್ವಜನಿಕರು ಎದುರಿಸುವ ತೊಂದರೆಗಳು, ಇತರ ಅನಾನುಕೂಲಗಳ ಕುರಿತು ಹಾಗೂ ಪ್ರಾಕೃತಿಕ  ವಿಕೋಪಕ್ಕೆ  ಸಂಬAಧಿಸಿದ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು, ಮಾಹಿತಿಯನ್ನು ಪಡೆಯಲು ಅಥವಾ ಇನ್ನಾವುದೇ ರೀತಿಯಲ್ಲಿ ತುರ್ತು ಸಂಧರ್ಭದಲ್ಲಿ ಜಿಲ್ಲಾಡಳಿತದ ನೆರವನ್ನು ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯಾಚರಿಸುವ ಟೋಲ್ ಫ್ರೀ ಸಂಖ್ಯೆ ( 24*7 ) ಕಂಟ್ರೋಲ್ ರೂಂ – 1077  ಹಾಗೂ  ದೂರವಾಣಿ ಸಂಖ್ಯೆ : 0820-2574802 ಪ್ರಸ್ತುತ ಸಾರ್ವಜನಿಕರ ಸೇವೆಗೆ ಚಾಲ್ತಿಯಲ್ಲಿರುತ್ತದೆ ಎಂದು ಕೂರ್ಮಾರಾವ್ ಎಂ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!