ಪಿಲಿಕುಳದಲ್ಲಿ ಜೂ. 11 ರಿಂದ ಹಣ್ಣುಗಳ ಉತ್ಸವ, ಹಲಸು ಮೇಳ

 ಪಿಲಿಕುಳದಲ್ಲಿ ಜೂ. 11 ರಿಂದ ಹಣ್ಣುಗಳ ಉತ್ಸವ, ಹಲಸು ಮೇಳ
Share this post
jack-fruit

ಮಂಗಳೂರು,ಜೂ.07, 2022: ನಗರದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜೂ.11 ಮತ್ತು  12 ರಂದು ಬೆಳಿಗ್ಗೆ 9 ರಿಂದ ಸಂಜೆ  6 ಗಂಟೆಯವರೆಗೆ ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳವನ್ನು ಆಯೋಜಿಸಲಾಗಿದೆ.

ಪ್ರಾದೇಶಿಕ ಹಾಗೂ ಇತರೆ ರಾಜ್ಯಗಳ ವಿವಿಧ ತಳಿಯ ಹಣ್ಣುಗಳೊಂದಿಗೆ ಔಷಧಿಯ ಗಿಡಗಳು, ಕಸಿ ಗಿಡಗಳು, ಬೀಜಗಳು, ಸಾವಯವ ಬಳಗದ ವಿವಿಧ ಆಹಾರ ಪದಾರ್ಥಗಳು ಹಾಗೂ ಹಣ್ಣುಗಳ ಖಾದ್ಯ, ಪಾನಿಯಗಳನ್ನು ಬೆಳೆಗಾರರೇ ತಂದು ಮಾರಾಟ ಮಾಡುತ್ತಾರೆ ಅದರೊಂದಿಗೆ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಮೀನಿನ ಖಾದ್ಯಗಳನ್ನು ಪ್ರದರ್ಶಿಸಿ ಮಾರಾಟ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ: 7349212817, 9686673237, 9480229764 ಸಂಪರ್ಕಿಸುವಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!