ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

 ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ
Share this post

ಮಂಗಳೂರು,ಮೇ.31, 2022: ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ತಾಂತ್ರಿಕ ಅಥವಾ ಪಾಸಾ ವೃತ್ತಿಯಲ್ಲಿ ತರಬೇತಿ ಪಡೆಯಲು ಪಾಸಾ, ಇಲೆಕ್ಟ್ರೀಷಿಯನ್, ಫಿಟ್ಟರ್, ಮೆಕ್ಯಾನಿಕಲ್ ಡಿಸೇಲ್, ಎಂ.ವಿ.ಬಿ.ಬಿ., ವೆಲ್ಡರ್, ಮೆಕ್ಯಾನಿಕ್ ಆಟೊ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಹಾಗೂ ಮೋಟಾರ್ ಮೆಕ್ಯಾನಿಕ್ ವೆಹಿಕಲ್‍ನ ಶಿಶಿಕ್ಷು ವೃತ್ತಿಗಳಲ್ಲಿ ಅರ್ಹರಿಂದ ವಾಕ್ ಇನ್ ಸಂದರ್ಶನಕ್ಕಾಗಿ 2022ರ ಜೂನ್ 25ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಅವಧಿ ಒಂದು ವರ್ಷ.

2022ರ ಜೂನ್ 25ಕ್ಕೆ 18 ವರ್ಷ ತುಂಬಿರಬೇಕು, ಈಗಾಗಲೇ ತರಬೇತಿ ಪಡೆದವರು ಅರ್ಜಿ ಸಲ್ಲಿಸುವಂತಿಲ್ಲ, ಅರ್ಜಿಗಳನ್ನು ಆಯೋಗದ www.apprenticeshipindia.org ರಲ್ಲಿ ಆನ್‍ಲೈನ್ ಮೂಲಕ ನೋಂದಾಯಿಸಬೇಕು ಹಾಗೂ ಪ್ರತಿಯನ್ನು ಸಲ್ಲಿಸಬೇಕು, ಸಲ್ಲಿಸದ ಅರ್ಜಿಯನ್ನು ತಿರಸ್ಕರಿಸಲಾಗುವುದು ಹೆಚ್ಚಿನ ಮಾಹಿತಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯವರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!