ಕೆ.ಎಸ್.ಆರ್.ಟಿ.ಸಿ: ಕೊಡಗು ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಪ್ಯಾಕೇಜ್ ಟೂರ್

 ಕೆ.ಎಸ್.ಆರ್.ಟಿ.ಸಿ: ಕೊಡಗು ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಪ್ಯಾಕೇಜ್ ಟೂರ್
Share this post

ಮಂಗಳೂರು, ಅ.08, 2026: ಕೆ.ಎಸ್.ಆರ್.ಟಿ.ಸಿ ವತಿಯಿಂದ ಮೊದಲ ಬಾರಿಗೆ ಮಡಿಕೇರಿ ದಸರಾ ಪ್ರಯುಕ್ತ ಕೊಡಗು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಅನ್ನು ಅಕ್ಟೋಬರ್ 11 ರಿಂದ 26 ರವರೆಗೆ ಆಯೋಜಿಸಲಾಗಿದೆ.

ಮಾರ್ಗಗಳ ವಿವರ:
ಕಾವೇರಿ ದರ್ಶನ: ಮಡಿಕೇರಿ ಬಸ್ಸು ನಿಲ್ದಾಣದಿಂದ ಬೆಳಿಗ್ಗೆ 6:30 ಗಂಟೆ ನಿರ್ಗಮನ
ಭೇಟಿ ನೀಡುವ ಪ್ರೇಕ್ಷಣೀಯ ಸ್ಥಳಗಳು: ಓಂಕಾರೇಶ್ವರ ದೇವಸ್ಥಾನ, ಇಗ್ಗುತಪ್ಪ ದೇವಸ್ಥಾನ, ಭಾಗಮಂಡಲ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಅಬ್ಬಿ ಜಲಪಾತ, ರಾಜಾ ಸೀಟು

ಕೊಡಗಿನ ಸೊಬಗು: ಮಡಿಕೇರಿ ಬಸ್ಸು ನಿಲ್ದಾಣದಿಂದ ಬೆಳಿಗ್ಗೆ 6:30 ಗಂಟೆ ನಿರ್ಗಮನ
ಭೇಟಿ ನೀಡುವ ಪ್ರೇಕ್ಷಣೀಯ ಸ್ಥಳಗಳು: ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಜಲಾಶಯ/ ಆನೆ ಕ್ಯಾಂಪ್,  ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ,  ಕಾಫಿ ಪ್ಲಾಂಟೇಶನ್, ಅಬ್ಬಿ ಜಲಪಾತ, ರಾಜಾ ಸೀಟು.

ಈ ಎರಡು ಪ್ರವಾಸಗಳಿಗೆ ವಯಸ್ಕರಿಗೆ ರೂ 400 ಹಾಗೂ ಮಕ್ಕಳಿಗೆ ರೂ 300 ನ್ನು (ಊಟೋಪಚಾರ/ಎಂಟ್ರಿ ಶುಲ್ಕ ಹೊರತುಪಡಿಸಿ) ಪ್ರಯಾಣದರ ವಿಧಿಸಿದ್ದು, ಕರ್ನಾಟಕ ಸಾರಿಗೆ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

ಈ ಬಸ್ಸುಗಳು ಮಡಿಕೇರಿ ಬಸ್ಸು ನಿಲ್ದಾಣದಿಂದ ಬೆಳಿಗ್ಗೆ 6:30 ಗಂಟೆಗೆ ಹೊರಟು ರಾತ್ರಿ 7:30 ಗಂಟೆಗೆ ಮಡಿಕೇರಿ ಬಸ್ಸು ನಿಲ್ದಾಣಕ್ಕೆ ತಲುಪಲಿದೆ. ಈ ಟೂರ್ ಪ್ಯಾಕೇಜ್‍ಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ನಿಗಮದ ವೆಬ್‍ಸೈಟ್ www.ksrtc.in ಗೆ ಭೇಟಿ ನೀಡಿ ಮುಂಗಡ ಆಸನ ಕಾಯ್ದಿರಿಕೊಳ್ಳಬಹುದು. ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಒಂದು ದಿನದ ಪ್ಯಾಕೇಜ್ ಟೂರ್ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಪುತ್ತೂರು ವಿಭಾಗ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!