ಕರ್ನಾಟಕ ಪಾಲಿಟೆಕ್ನಿಕ್: ಅರ್ಜಿ ಆಹ್ವಾನ
ಮಂಗಳೂರು,ಮೇ.21, 2022: ನಗರದ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್‍ನಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.
ಪಾಲಿಮರ್ ಕೋರ್ಸ್‍ಗೆ ಮೊದಲು ಬರುವ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಪ್ರಾಂಶುಪಾಲರ ಹಂತದಲ್ಲಿಯೇ ಸ್ಥಳದಲ್ಲಿಯೇ ಪ್ರವೇಶಾತಿ ನೀಡಲಾಗುವುದು. ಉಳಿದಿರುವ 07 ವಿವಿಧ ಕೋರ್ಸ್‍ಗಳಿಗೆ ಮೆರಿಟ್ ಹಾಗೂ ರೋಸ್ಟರ್‍ಗೆ ಅನುಗುಣವಾಗಿ ಆನ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.
ಅಭ್ಯರ್ಥಿಗಳು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್ https://dtetech.karnataka.gov.in/kartechnical,https://dtek.karnataka.gov.in ಅಥವಾ www.cetonline.karnataka.gov.in/kea/ ಗಳಲ್ಲಿರುವ ಅರ್ಜಿ, ಆದ್ಯತಾ ಪಟ್ಟಿ ಮತ್ತು ಮಾಹಿತಿ ಪುಸ್ತಕಗಳನ್ನು ಡೌನ್‍ಲೋಡ್ ಮಾಡಿಕೊಂಡು ನಂತರ ಭರ್ತಿ ಮಾಡಿದ ಅರ್ಜಿಯನ್ನು ಪ್ರಾಂಶುಪಾಲರು, ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಕದ್ರಿ ಹಿಲ್ಸ್, ಮಂಗಳೂರು ಇಲ್ಲಿಗೆ ಮೇ.26ರ ಗುರುವಾರ ಸಂಜೆ 5.30ರೊಳಗೆ ಸಲ್ಲಿಸಬೇಕು.
ಅಂತಿಮ ಮೆರಿಟ್ ಪಟ್ಟಿ ಮೇ.28ರಂದು ಸಂಜೆ 5 ಗಂಟೆಯ ನಂತರ ಪ್ರಕಟಣೆಗೊಂಡು, ಸೀಟು ಹಂಚಿಕೆ ಮೇ.30 ರಂದು ನಡೆಯಲಿದೆ. ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮೇ.31 ರಿಂದ ಜೂನ್ 02 ರೊಳಗೆ ಪ್ರವೇಶ ಪಡೆಯುವುದು.
ಡಿಪ್ಲೊಮಾ ಪ್ರವೇಶ ಪ್ರಕ್ರಿಯೆಯ ಅಧಿಸೂಚನೆ ಮತ್ತು ವೇಳಾಪಟ್ಟಿಯನ್ನು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಿಂದ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಕಚೇರಿಯ ದೂ.ಸಂಖ್ಯೆ:0824-2211636 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್‍ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.