ಮೇ.3 ರಿಂದ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು, ಸದಸ್ಯರ ಜಿಲ್ಲಾ ಪ್ರವಾಸ
ಮಂಗಳೂರು,ಏ.29, 2022: ರಾಜ್ಯ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಮೇ.3ರಿಂದ ಜಿಲ್ಲೆಯ ಪ್ರವಾಸ ಕೈಗೊಂಡಿದೆ.
ಸಮಿತಿಯ ಅಧ್ಯಕ್ಷರಾದ ಬಿ.ಎಂ. ಫಾರೂಕ್ ಸದಸ್ಯರುಗಳಾದ ಆಯನೂರು ಮಂಜುನಾಥ್, ಶಶೀಲ್ ಜಿ ನಮೋಶಿ, ಕೆ.ಟಿ ಶ್ರೀ ಕಂಠೇಗೌಡ, ಯು.ಬಿ ವೆಂಕಟೇಶ್, ಚೆನ್ನರಾಜ್ ಬಸವರಾಜ್, ಹಟ್ಟಿಹೊಳಿ ಅವರು ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳಿಗೆ ಸಂಬಂಧಿತ ಭಾಕಿ ಭರವಸೆ ಸಂಖ್ಯೆಗಳ ಕುರಿತು ಸ್ಥಳ ಪರಿಶೀಲನೆ ಹಾಗೂ ಸಭೆ ನಡೆಸಲು ಜಿಲ್ಲೆಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ರವಾಸದ ವಿವರ:
ಮೇ.3ರ ಮಂಗಳವಾರ ವಿಮಾನದ ಮೂಲಕ ಬೆಂಗಳೂರಿನಿಂದ ಹೊರಟು ಸಂಜೆ 5.30ಕ್ಕೆ ಮಂಗಳೂರು ತಲುಪಿ ನಗರದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮೇ.4ರ ಬುಧವಾರ ಬೆಳಿಗ್ಗೆ 10.20ರಿಂದ ನಗರದ ಜಿಲ್ಲಾಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದ ಬಾಕಿ ಭರವಸೆ ಸಂಖ್ಯೆ, 7208/2018, 7212/2018 ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಬಾಕಿ ಭರವಸೆ ಸಂಖ್ಯೆ: 7847/2021ರ ಕುರಿತು, ಇಲಾಖಾ ಅಧಿಕಾರಿಗಳೊಂದಿಗೆ ಎಂ.ಆರ್.ಪಿ.ಎಲ್, ಎಂ.ಎಸ್.ಇ.ಜೆಡ್, ಐ.ಎಸ್.ಪಿ.ಆರ್.ಎಲ್, ಎನ್.ಎಂ.ಪಿ.ಟಿ ಹಾಗೂ ಓ.ಡಿ.ಸಿ ರಸ್ತೆ ಮತ್ತು ಪ್ರವ ಲೈನ್ ಕಾರಿಡಾರ್ಗಳಿಗೆ ಭೇಟಿ ಮತ್ತು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
ಅಂದು ಸಂಜೆ 4 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಸಭೆ ಸೇರಿ ಬಾಕಿ ಭರವಸೆ ಸಂಖ್ಯೆ 7208/2018 7212/2018, 7847/2021ರ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ನಗರಾಭಿವೃದ್ಧಿ, ಪರಿಸರ ಮಾಲಿನ್ಯ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿ ಶಾಮಕ ದಳ ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ನಂತರ ನಗರದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮೇ.5ರ ಗುರುವಾರ ಬೆಳಿಗ್ಗೆ 10.20ಕ್ಕೆ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಬಾಕಿ ಭರವಸೆ, ಸಂಖ್ಯೆ: 7847/2021 ಕುರಿತು ನಗರಾಭಿವೃದ್ಧಿ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖಾ ಅಧಿಕಾರಿಗಳೊಂದಿಗೆ ಸುರತ್ಕಲ್ ಹಾಗೂ ಉಳ್ಳಾಲ ವೆಟ್ವೆಲ್ ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಬಾಕಿ ಭರವಸೆಗಳ ಸಂಖ್ಯೆ 7016/2018ರ ಕಡಲ ಕೊರೆತ ಮತ್ತು ಮೀನುಗಾರರ ಸಮಸ್ಯೆ ಕುರಿತು ಸೋಮಶ್ವರಕ್ಕೆ ಭೇಟಿ ಮತ್ತು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
ಅಂದು ಮಧ್ಯಾಹ್ನ 2.30ಕ್ಕೆ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಸಭೆ ಸೇರಿ ಭರವಸೆ ಸಂಖ್ಯೆ:7847/2021 ನಗರಾಭಿವೃದ್ಧಿ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖಾಧಿಕಾರಿಗಳೊಂದಿಗೆ ಹಾಗೂ 7016/2018ರ ಕುರಿತು ಪಶುಸಂಗೋಪನೆ ಮತ್ತು ಮೀನುಗಾರಿಕೆ ಹಾಗೂ ಬಂದರು, ಒಳನಾಡು ಜಲಸಾರಿಗೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡಸಲಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.