ಏ.30 ರಂದು ಶಾಲಾ ಶಿಕ್ಷಕರ ಕೌನ್ಸಿಲಿಂಗ್

 ಏ.30 ರಂದು ಶಾಲಾ ಶಿಕ್ಷಕರ ಕೌನ್ಸಿಲಿಂಗ್
Share this post

ಮಂಗಳೂರು,ಏ.29, 2022: ಪ್ರಾಥಮಿಕ ಶಾಲಾ ವೃಂದದ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಏ.30ರ ಶನಿವಾರ ಬೆಳಿಗ್ಗೆ 10 ಗಂಟೆಗೆ ನಗರದ ಬಿ.ಆರ್.ಸಿ ಕೇಂದ್ರ ಗಾಂಧಿನಗರದಲ್ಲಿ ಮುಂಬಡ್ತಿ ನೀಡಿ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗುವುದು.

ಅರ್ಹ ಶಿಕ್ಷಕರ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಸಂಬಂಧಿಸಿದ ಶಿಕ್ಷಕರು/ಮುಖ್ಯ ಶಿಕ್ಷಕರು ಸದರಿ ದಿನಾಂಕದಂದು ನಿಗಧಿ ಪಡಿಸಿರುವ ಸ್ಥಳದಲ್ಲಿ ಸಭೆಗೆ ಹಾಜರಾಗಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!