ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿದ ಶಾಸಕ ಕಾಮತ್
ಮಂಗಳೂರು, ಏ 22, 2022: ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನ ಆಡುಮರೋಳಿ ಚಾಮುಂಡಿ ಗುಡಿ ಹಾಗೂ ಪಾಂಪುಮನೆ ಬಳಿ 1 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಭೂಮಿಪೂಜೆ ನೆರವೇರಿಸಿದರು.
“ಮಂಗಳೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ಸರಕಾರವು ನೀರಾವರಿ ಇಲಾಖೆಯಡಿ ನಗರಕ್ಕೆ ಅನುದಾನ ಬಿಡುಗಡೆಗೊಳಿಸಿದೆ. ಇಲ್ಲಿನ ಸಮಸ್ಯೆಯ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಅನುದಾನಕ್ಕೆ ಮನವಿ ಸಲ್ಲಿಸಿದ್ದೆ. ಅದರಂತೆ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಲಾಗಿದ್ದು ರಾಜಕಾಲುವೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ,” ಎಂದರು.
ಮಳೆಗಾಲದ ಸಂದರ್ಭದಲ್ಲಿ ಮಳೆನೀರು ಉಕ್ಕಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅಲ್ಲಲ್ಲಿ ಕುಸಿದಿರುವ ರಾಜಕಾಲುವೆಗಳ ತಡೆಗೋಡೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಬಳಕೆ ಮಾಡಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೆಟರ್ ಕೇಶವ ಮರೋಳಿ, ಬಿಜೆಪಿ ಮುಖಂಡರಾದ ಕಿರಣ್ ಮಾರೋಳಿ, ಕೃಷ್ಣ ಎಸ್ಆರ್, ಜಗದೀಶ್ ಶೆಣೈ, ಜಗನ್ನಾಥ್ ಆಡು ಮನೆ, ಪ್ರಶಾಂತ್ ಮರೋಳಿ, ರಾಘು ಮರೋಳಿ, ಅರುಣ್ ಶೆಟ್ಟಿ,ರವಿ ಸತೀಶ್, ಬಾಲಕೃಷ್ಣ ಕೊಟ್ಟಾರಿ, ಮಾಲತಿ, ತೇಜಾ ಕ್ಷ ಸುವರ್ಣ, ಪ್ರವೀಣ್ ರೈ ಕುಕ್ಕುವಳ್ಳಿ ,ಗೋಪಾಲ್ ಅಮೀನ್,ಯದುವಿರ್,ರೂಪ, ಸಾವಿತ್ರಿ, ಜನಾರ್ಧನ. , ಫ್ರಾನ್ಸಿಸ್, ಶಿವಪ್ಪ ಅಮೀನ್, ಬೋಜ ಅಮೀನ್, ಸರಳ, ವಸಂತ್ ಜೆ ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು.