ಉಜಿರೆಯ ರತ್ನ ಮಾನಸದಲ್ಲಿ ಶಿವರಾತ್ರಿ ಆಚರಣೆ

 ಉಜಿರೆಯ ರತ್ನ ಮಾನಸದಲ್ಲಿ ಶಿವರಾತ್ರಿ ಆಚರಣೆ
Share this post

ಉಜಿರೆ, ಮಾ 08, 2022: ಶಿವರಾತ್ರಿ ಹಬ್ಬವು ಪ್ರಮುಖ ಹಬ್ಬವಾಗಿದ್ದು, ನಾಡಿನಾದ್ಯಂತ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಭಕ್ತಿಯನ್ನು ಮೂಡಿಸಲು ರತ್ನ ಮಾನಸದಲ್ಲಿ ಕೂಡ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಎಂದು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ್ ಹೇಳಿದರು

ಉಜಿರೆಯ ರತ್ನಮಾನಸ ವಸತಿ ಸಂಸ್ಥೆಯಲ್ಲಿ ನಡೆದ ಶಿವರಾತ್ರಿ ಹಬ್ಬದ ಆಚರಣೆ ಹಾಗೂ ಎಸ್.ಎಸ್.ಎಲ್.ಸಿ. ವಿಧ್ಯಾರ್ಥಿಗಳ ಶುಭಾಷಯ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.

ರತ್ನಮಾನಸದಲ್ಲಿ ಜೀವನ ಮೌಲ್ಯ ಶಿಕ್ಷಣದಿಂದ ಗುರುತಿಕೊಂಡಿದೆ, ಪ್ರತಿ ನಿತ್ಯ ಯೋಗ, ಭಜನೆ, ಕೃಷಿ ತರಬೇತಿ, ಇತರೆ ಚಟುವಟಿಕೆಗಳ ತರಬೇತಿಯೊಂದಿಗೆ ರತ್ನ ಮಾನಸದ ವಿಧ್ಯಾರ್ಥಿಗಳು ಶಿಸ್ತುಬದ್ಧ ಸಂಸ್ಕಾರ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಸಂಸ್ಥೆಯಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳು ಅದೃಷ್ಟ ಶಾಲಿಗಳು, ಇಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಅವಕಾಶವಿದೆ. ಇಲ್ಲಿನ ತರಬೇತಿ ಮುಗಿಸಿ ಹೊರಹೊದ ವಿಧ್ಯಾರ್ಥಿಗಳು ಬದುಕಿನಲ್ಲಿ ಎಂತಹ ಸವಾಲುಗಳನ್ನು ಸಮರ್ಥ ರೀತಿಯಲ್ಲಿ ಎದುರಿದಲು ಸನ್ನದ್ನರಾಗಿರುತ್ತಾರೆ ಎಂದು ಮುಖ್ಯ ಅತಿಥಿಗಳಾಗಿದ್ದ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗಡೆ ಹೇಳಿದರು.

ರತ್ನಮಾನಸ ವಿಧ್ಯಾರ್ಥಿಗಳಾದ ಕಿಶೋರ್ ಪಾಟೀಲ್, ಪವನ್ ಕುಮಾರ್ ಶಿವರಾತ್ರಿ ಹಬ್ಬದ ವಿಶೇಷತೆ ಕುರಿತು ಮಾತನಾಡಿದರು. ರತ್ನಮಾನಸದಲ್ಲಿ ಸೇವೆ ಸಲ್ಲಿಸಿದ್ದ ಹರೀಶ್ ಅವರಿಗೆ ವಿಧ್ಯಾರ್ಥಿಗಳು ಹಾಗೂ ಸಂಸ್ಥೆಯ ಪರವಾಗಿ ಬಿಳ್ಕೊಡಲಾಯಿತು.

ಸಂಸ್ಥೆಯ ನಿಲಯಪಾಲಕರಾದ ಯತೀತ್ ಕೆ. ಭಳಂಜ ಮಾತನಾಡಿ ರತ್ನ ಮಾನಸದಲ್ಲಿ ವಿಧ್ಯಾರ್ಥಿಗಳಿಗೆ ಶಿಸ್ತು ಬದ್ದ ಜೀವನ ಪಾಠವನ್ನು ಕಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿನ ಶಿಸ್ತು ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಕೊಂಡು ಆದರ್ಶಪ್ರಾಯವಾದ ರತ್ನಗಳಂತೆ ಜೀವನ ನೆಡೆಸಿ ಎಂದು ಆಶಿಸಿದರು.

ಶಿವರಾತ್ರಿ ಪ್ರಯುಕ್ತ ವಿಧ್ಯಾರ್ಥಿಗಳು ಸಾಮೂಹಿಕ ಭಜನೆ ಮತ್ತು ಪೂಜೆ ನೆರವೇರಿಸಿ ಪ್ರಾಂಜಲ ಮನಸ್ಸಿನಿಂದ ಶಿವರಾತ್ರಿ ಆಚರಣೆ ಮಾಡಿದರು.

ಕಾರ್ಯಕ್ರಮದಲ್ಲಿ ನಿಲಯ ಪಾಲಕ ರವಿಚಂದ್ರ, ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಗೌತಮ್ ಬಿ.ಪಿ ನಿರೂಪಣೆ ಮಾಡಿದರು. ಅನುವೇಷ್ ಸ್ವಾಗತಿಸಿ, ಜೀವನ್ ಗೌಡ ಧನ್ಯವಾದ ಸಮರ್ಪಣೆ ಮಾಡಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!