ಮಾರ್ಚ್ 4 ರಿಂದ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ
ಮಂಗಳೂರು,ಫೆ.23, 2022: ಕೇಂದ್ರ ಸರ್ಕಾರದ ಕರಕುಶಲ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಿಂದ ಮಾರ್ಚ್ 4 ರಿಂದ ರಾಷ್ಟ್ರೀಯ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 4 ರಿಂದ 13 ರವರೆಗೆ ಪಿಲಿಕುಳ ಅರ್ಬನ್ ಹಾಥ್ನಲ್ಲಿ ಕ್ರಾಪ್ಟ್ ಬಜಾರ್ ಮೇಳ, ಮಾರ್ಚ್ 14 ರಿಂದ 23 ರವರೆಗೆ ಮಂಗಳೂರಿನ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ಗಾಂಧಿ ಶಿಲ್ಪ ಬಜಾರ್ ಹಾಗೂ ಮಾರ್ಚ್ 24 ರಿಂದ ಏಪ್ರಿಲ್ 2 ರ ವರೆಗೆ ಪಿಲಿಕುಳ ಅರ್ಬನ್ ಹಾಥ್ನಲ್ಲಿ ಎಝ್ಸಿಬಿಷನ್ ನಡೆಯಲಿದೆ.
ಪಶ್ಚಿಮ ಬಂಗಾಳ, ದೆಹಲಿ, ಚೆನೈ, ರಾಜಸ್ತಾನ ಮತ್ತು ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಕುಶಲಕರ್ಮಿಗಳು ತಯಾರಿಸಿದ ಸೀರೆಗಳು, ಮರದ ಅಲಂಕಾರಿಕಾ ಉತ್ಪನ್ನಗಳು, ಮಣ್ಣೆನ ವಿವಿಧ ಆಕರ್ಷಕ ಸಾಮಾಗ್ರಿಗಳು, ಬ್ಯಾಗ್ಗಳು, ವಿವಿಧ ರೀತಿಯ ಉಡುಪುಗಳು, ಸ್ತ್ರೀಯರ ಅಲಂಕಾರಿಕಾ ವಸ್ತುಗಳು, ಬೂಟ್, ಚಪ್ಪಲಿಗಳು ಹಾಗೂ ಇತೆರ ಕರಕುಶಲ ವಸ್ತುಗಳನ್ನು ಮೇಳದಲ್ಲಿ ಖರೀದಿಸಬಹುದು ಎಂದು ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.