ಯುವಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಚಿಂತನೆ: ಸುನೀಲ್ ಕುಮಾರ್

 ಯುವಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಚಿಂತನೆ: ಸುನೀಲ್ ಕುಮಾರ್
Share this post

ಮಂಗಳೂರು,ಫೆ.11, 2022: ನಾಡಿನ ಹಿರಿಯ ಕಲಾವಿದರಂತೆ ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸಲು ಯುವಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿಂತನೆ ನಡೆಸಿದ್ದು, ಆ ಮೂಲಕ ಕಲಾ ಪ್ರಕಾರಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾಟಿಸುವ ಯತ್ನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ತಿಳಿಸಿದರು.

ಅವರು ಫೆ. 11ರ ಶುಕ್ರವಾರ ನಗರದ ತುಳು ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತಿಗಳ ಮತ್ತು ಕಲಾವಿದರ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಡಿನ ಕಲೆ-ಸಾಹಿತ್ಯದ ಪ್ರೋತ್ಸಾಹಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ, ಅದರಂತೆ ನಾಡಿನ ಹಿರಿಯ ಕಲಾವಿದರಲ್ಲಿರುವ ಅಪೂರ್ವ ಕಲೆಗಳು, ಪರಂಪರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಿರಿಯ ಕಲಾವಿದರಿಗೆ ಉತ್ತೇಜನ ನೀಡಲು ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಇಲಾಖೆ ಚಿಂತಿಸಿದೆ, ಆ ಮೂಲಕ ನಾಡಿನ ಸಂಪದ್ಬರಿತ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ, ಅದರ ಅಂಗವಾಗಿ ಯುವಜನಾಂಗಕ್ಕೆ ಹೆಚ್ಚಿನ ಸಮ್ಮೇಳನಗಳು, ಸಾಂಸ್ಕೃತಿಕ ಕಲಾ ಪ್ರಕಾರಗಳಿಗೆ ವೇದಿಕೆ ಒದಗಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ರಂಗಮಂದಿರದ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ, ರಾಜ್ಯದಲ್ಲಿ 11 ಸಾವಿರ ಕಲಾವಿದರಿಗೆ ತಿಂಗಳಿಗೆ 2500 ರೂ.ಗಳ ಮಾಶಾಸನ ನೀಡಲಾಗುತ್ತಿದೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅದರಲ್ಲಿ ಸುಧಾರಣೆ ತರುವ ಚಿಂತನೆಯೂ ಇದೆ ಎಂದು ತಿಳಿಸಿದರು.

ನೈಜ ಕಲಾವಿದರಿಗೆ ಅನ್ಯಾಯವಾಗಬಾರದೆಂಬ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗುರುತಿನ ಚೀಟಿ ಹಾಗೂ ಕಲಾವಿದರ ಡಾಟಾಬೇಸ್ ಸಂಗ್ರಹಿಸುವ ಚಿಂತನೆಯಿದೆ ಎಂದ ಸಚಿವರು, ಗಡಿ ಭಾಗದ ಸಾಹಿತ್ಯ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಯೋಜನೆ ರೂಪಿಸಲಾಗುವುದು ಎಂದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಯೋಜನೆಯಡಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಇದರೊಂದಿಗೆ ರಾಜ್ಯದ 10 ಸ್ವಾತಂತ್ರ ಸಂಗ್ರಾಮಗಳು ನಡೆದ ಸ್ಥಳಗಳನ್ನು ಆಯ್ಕೆ ಮಾಡಿ ಹೋರಟದ ನೆಲದಲ್ಲಿ ಒಂದು ದಿನ ಎಂಬ ಕಾರ್ಯಕ್ರಮದ ಮೂಲಕ ಜನರಿಗೆ ನಮ್ಮ ರಾಜ್ಯದ ಇತಿಹಾಸ ಮತ್ತು ಸಂಸ್ಕøತಿಯನ್ನು ಪ್ರಚಾರ ಪಡಿಸುವ ಮಹಾತ್ವಾಕಾಂಷೆ ಇದೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಸಂಸ್ಕøತಿಗೆ ಸಂಬಂಧಪಟ್ಟಂತೆ ಉತ್ಸವಗಳು ನಡೆಯಬೇಕು, ಇದಕ್ಕಾಗಿ ಬಜೆಟ್‍ನಲ್ಲಿ ಅನುದಾನವನ್ನು ಒದಗಿಸಲು ಪ್ರಯತ್ನಿಸಲಾಗುವುದು. ಎಲ್ಲಾ ಚಿಂತನೆಗಳು-ಯೋಜನೆಗಳು ಯಶಸ್ವಿಯಾಗಲು ಕಲಾವಿದರು ಒಮ್ಮನಸಿನಿಂದ ಚಿಂತಿಸಿ ಜಿಲ್ಲೆಯ ಸಂಸ್ಕøತಿಯನ್ನು ಶ್ರೀಮಂತಗೊಳಿಸಬೇಕು ಜತೆಗೆ ನಮ್ಮ ಈ ಸಂವಾದ ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.

ವಿಧಾನ ಪರಿಷತ್‍ನ ಸದಸ್ಯರಾದ ಪ್ರತಾಪ್ ಸಿಂಹ ನಾಯ್ಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್‍ಸಾರ್, ಧಾರವಾಡ ಜಿಲ್ಲೆಯ ರಂಗಾಯಣದ ನಿರ್ದೇಶಕ ಯಶವಂತ ಸರ್ ದೇಶಪಾಂಡೆ, ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ರಾಜೇಶ್. ಜಿ ಅತಿಥಿಗಳನ್ನು ಸ್ವಾಗತಿಸಿದರು. ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮ ವಂದಿಸಿದರು.
ಕದ್ರಿಯ ನವನೀತ್ ಶೆಟ್ಟಿ ನಿರೂಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!