ವೀರ ವೆಂಕಟೇಶ ದೇವರ ನೂತನ ಬ್ರಹ್ಮರಥದ ಪುರ ಪ್ರವೇಶ
ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು ಜ 17, 2022: ಇತಿಹಾಸ ಪ್ರಸಿದ್ಧ ಮಂಗಳೂರು ರಥ ಎಂದೇ ಪ್ರಖ್ಯಾತವಾದ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಬ್ರಹ್ಮರಥವು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದಶನದಲ್ಲಿ ನಿರ್ಮಾಣಗೊಂಡಿದ್ದು, ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ದಲ್ಲಿ ನಿರ್ಮಾಣ ಗೊಂಡಿದ್ದು ಸೋಮವಾರ ನೂತನ ಬ್ರಹ್ಮರಥದ ಪುರಪ್ರವೇಶವು ವಿಜೃಂಭಣೆಯಿಂದ ಜರಗಿತು.
ನೂತನ ಬ್ರಹ್ಮರಥದ ಹಸ್ತಾಂತರ ಕಾರ್ಯಕ್ರಮ ಕೋಟೇಶ್ವರದಲ್ಲಿ ಜರಗಿದ್ದು ಬಳಿಕ ಕೋಟೇಶ್ವರ, ಬ್ರಹ್ಮಾವರ, ಉಡುಪಿ ಮೂಲಕ ಮಂಗಳೂರಿಗೆ ತಲುಪಿದ್ದು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಸಿ . ಎಲ್ . ಶೆಣೈ , ಕೆ . ಪಿ . ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.
ನೂತನ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮ ಜನವರಿ 25 ರಂದು ಜರಗ ಲಿರುವುದು.