ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಕಾರವಾರ ಅ. 4, 2021: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ 2020-21 ನೇ ಸಾಲಿನ ಕನ್ನಡ ಭಾಷೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಪಿ ಎಚ್ ಡಿ ಮತ್ತು ಎಂಫಿಲ್ ಪದವಿ ಪಡೆದ ಮಹಾಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಸೇವಾಸಿಂಧು ಯೋಜನೆಯ ಮೂಲಕ ಹಾಗೂ ಸೃಜನಾತ್ಮಕ ಪ್ರಕಟಿತ ಪುಸ್ತಕಗಳನ್ನು ಪ್ರಕಟಿಸಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
2020 ಎಪ್ರಿಲ್ ನಿಂದ ಮಾರ್ಚ 2021 ರ ಅವಧಿಯಲ್ಲಿ, ವಿಶ್ವವಿದ್ಯಾನಿಲಯಗಳಿಂದ ಯಾವುದೇ ವಿಷಯದ ಬಗ್ಗೆ ಕನ್ನಡದಲ್ಲಿ ಎಂ.ಫಿಲ್ ಪದವಿ ಪಡೆದ ಪ್ರೌಢಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಹಾಗೂ ಕನ್ನಡದಲ್ಲಿ ಪಿ ಹೆಚ್ ಡಿ ಪದವಿ ಪಡೆದ ಮಹಾಪ್ರಬಂಧಗಳ ಹಸ್ತ ಪತ್ರಿ ಮುದ್ರಣಕ್ಕೆ ಸಹಾಯ ಧನ ನೀಡಲಾಗುವುದು.
2020 ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಪ್ರಥಮ ಆವೃತ್ತಿ ಯಾಗಿ ಪ್ರಕಟವಾಗಿರುವ ಸೃಜನಾತ್ಮಕ ಪ್ರಕಟಿತ ಪುಸ್ತಕಗಳನ್ನು ಪ್ರಕಟಿಸಲು ಸಹಾಯಧನ ಪಡೆಯಲು ಆಸಕ್ತಿ ಹೊಂದಿರುವರು ಸೆಪ್ಟೆಂಬರ್ 4 ರ ಒಳಗೆ www.kannadasiri.karnataka.gov.in. https://sevasindhu.karnataka.gov.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಜಿಲ್ಲೆಯ ಆಸಕ್ತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆಯು ಸಹಾಯಕ ನಿರ್ದೇಶಕ ಎನ್.ಜಿ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.