ಪರಿಸರ ಸ್ನೇಹಿ ಅರಿಶಿನ ಗಣೇಶ ಅಭಿಯಾನ
ಕಾರವಾರ ಆ. 25, 2021: ಕೋವಿಡ್–19ನ ಹಿನ್ನೆಲೆಯಿಂದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಂಣ ಮಂಡಳಿಯು ಈ ಬಾರಿಯ ಗಣೇಶ ಹಬ್ಬವನ್ನು ಪರಿಸರ ಸ್ನೇಹಿ ಅರಿಶಿನ ಗಣೇಶ ಅಭಿಯಾನವನ್ನು ಹಮ್ಮಿಕೊಂಡಿದೆ.
ಪರಿಸರ ಸ್ನೇಹಿ ಅರಿಶಿನ ಗಣೇಶ ಅಭಿಯಾನ ಧ್ಯೇಯ ವಾಕ್ಯದೊಂದಿಗೆ ಸ್ವಯಂ ಸೇವೆ ಸಂಸ್ಥೆಗಳು, ಸ್ಥಳೀಯ ಸಕ್ರೀಯ ಸಂಘ ಸಂಸ್ಥೆಗಳು, ನಿವಾಸಿ ಸಂಘಗಳ ಸಹಕಾರದೊಂದಿಗೆ ಈ ಬಾರಿ ವಿಶಿಷ್ಟ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸಲಾಗುವುದು.
ಹಿಂದೂ ಧಾರ್ಮಿಕ ಆಚರಿಣೆಯಲ್ಲಿ ಬಳಸುವ ಕೆಲವು ಪದಾರ್ಥಗಳಾದ ಅರಿಸಿನ, ಗೋಮೂತ್ರ, ಸಗಣಿ, ಬೇವು, ತುಳುಸಿ ಮುಂತಾದವುಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಕೋವಿಡ್ ಸಮಯದಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತವಾದ ಗೋಧಿ ಹಿಟ್ಟು , ರಾಗಿ ಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶನ ವಿಗ್ರಹ ಪೂಜಿಸಿ ಮನೆಯಲ್ಲಿಯೇ ಗಣೇಶನ ಮೂರ್ತಿ ವಿಸರ್ಜಿಸುವ ಮೂಕಲ ಸಾಮಾಜಿಕ ಅಂತರ ಕಾಪಾಡಿಕೊಂಡು, ವಿಸರ್ಜಿತ ನೀರಿನಿಂದ ಮನೆಯನ್ನು ಶುಚಿ ಮಾಡಿಕೊಂಡರೆ ಕ್ರಿಮಿನಾಶಕವಾಗಿಯೂ ಬಳಕೆ ಆಗುವುದು.
ಕಸ ಸಂಗ್ರಹಣಾ ವಾಹನಗಳಲ್ಲಿ ಧ್ವನಿ ವರ್ಧಕಗಳನ್ನು ಅಳವಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕರು ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಳಬೇಕೆಂದು ಕಾರವಾರದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.