ಅಚ್ಚೇದಿನ್ ಹೆಸರಿನಲ್ಲಿ ದೇಶವನ್ನೇ ಸರ್ವನಾಶಗೊಳಿಸಿದ ನರೇಂದ್ರ ಮೋದಿ ಸರಕಾರ: ಸುನಿಲ್ ಕುಮಾರ್ ಬಜಾಲ್

 ಅಚ್ಚೇದಿನ್ ಹೆಸರಿನಲ್ಲಿ ದೇಶವನ್ನೇ ಸರ್ವನಾಶಗೊಳಿಸಿದ ನರೇಂದ್ರ ಮೋದಿ ಸರಕಾರ: ಸುನಿಲ್ ಕುಮಾರ್ ಬಜಾಲ್
Share this post
CPIM protest

ಮಂಗಳೂರು, ಜುಲೈ 06, 2021: ಅಚ್ಚೇದಿನ್ ತರುವುದಾಗಿ, ಬೆಲೆಯೇರಿಕೆಯನ್ನು ನಿಯಂತ್ರಿಸುವುದಾಗಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ, ಕಳೆದ 7 ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆಯನ್ನು ದಿವಾಳಿನಂಚಿಗೆ ಕೊಂಡೊಯ್ದು, ಜನರ ಬದುಕನ್ನೇ ಸರ್ವನಾಶಮಾಡಿದೆ. ಕೇಂದ್ರ ಸರಕಾರದ ವಿರುದ್ಧ ಪ್ರಬಲ ಜನಚಳುವಳಿ ಬೆಳೆದು ಬರುವ ಮೂಲಕ ದೇಶವನ್ನು ರಕ್ಷಿಸಲು ಜನತೆ ಒಂದಾಗಿ ನಿಲ್ಲಬೇಕಾಗಿದೆ ಎಂದು ಸಿ.ಪಿ.ಐ.ಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕರೆ ನೀಡಿದರು.

ಅವರು ಬೆಲೆಯೇರಿಕೆಯ ವಿರುದ್ಧ ಸಿ.ಪಿ.ಐ.ಎಂ ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ನಡೆಯುತ್ತಿರುವ ವಾರಾಚರಣೆ ಕಾರ್ಯಕ್ರಮ ದ ಭಾಗವಾಗಿ ಉರ್ವಾಸ್ಟೋರ್ ನಲ್ಲಿ ಜರುಗಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಹಿರಿಯ ಮುಖಂಡರಾದ ಅಶೋಕ್ ಶ್ರೀಯಾನ್, ಸ್ಯಾಮ್ಯುಯೆಲ್ ಟೈಟಸ್, ದಿನೇಶ್ ಶ್ರೀಯಾನ್, ಸರೋಜಿನಿ, ಸಿ.ಪಿ.ಐ.ಎಂ ಯುವ ನಾಯಕರಾದ ಮನೋಜ್,ಪ್ರಶಾಂತ್ ಎಂ.ಬಿ, ನಾಗೇಂದ್ರ, ರಘುವೀರ್, ರಾಜೇಶ್, ಇಕ್ಬಾಲ್, ಸುಖೇಶ್, ಸನತ್ ಮುಂತಾದವರು ಹಾಜರಿದ್ದರು.

Subscribe to our newsletter!

Other related posts

error: Content is protected !!