ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ಸಂಗ್ರಹ ವಿಧಾನದಿಂದ ಜನರಿಗೆ ತೊಂದರೆ: ಕೆ.ಅಶ್ರಫ್

 ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ಸಂಗ್ರಹ ವಿಧಾನದಿಂದ ಜನರಿಗೆ ತೊಂದರೆ: ಕೆ.ಅಶ್ರಫ್
Share this post

ಕೂಡಲೇ ಮರುಪರಿಶೀಲಿಸಲು ಆಗ್ರಹ

ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 29, 2021: ಮಂಗಳೂರು ಮಹಾನಗರಪಾಲಿಕೆ ಪ್ರಾರಂಭಿಸಿರುವ ತ್ಯಾಜ್ಯ ಸಂಗ್ರಹ ವಿಧಾನದಿಂದ ಜನರಿಗೆ ತೊಂದರೆಯುಂಟಾಗುತ್ತಿದೆ. ಇದನ್ನು ಕೂಡಲೇ ಮರುಪರಿಶೀಲಿಸಬೇಕು ಎಂದು ಮಾಜಿ ಮೇಯರ್ ಹಾಗೂ ಸಾಮಾಜಿಕ ಹೋರಾಟಗಾರ ಕೆ ಅಶ್ರಫ್ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಪಚ್ಚನಾಡಿಯಲ್ಲಿ ಮನಪಾ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ನಡೆದ ಅಗ್ನಿ ದುರಂತ ಮತ್ತು ಅದರ ವಿರುದ್ಧ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಾದ ನಂತರದ ಬೆಳವಣಿಗೆಯಲ್ಲಿ ಮ.ನ.ಪಾ ವು ನಗರದ ಪ್ರತೀ ಮನೆಗಳಲ್ಲಿ ದಿನಂಪ್ರತಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಹಸಿಕಸ ಮತ್ತು ಒಣಕಸ ಎಂಬುದಾಗಿ ಪ್ರತ್ಯೇಕ ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿಗೊಳಿಸುತ್ತಿದೆ.

“ವಾರದ 6 ದಿನಗಳಲ್ಲಿ ಹಸಿಕಸವನ್ನು ಮಾತ್ರ ಸಂಗ್ರಹಿಸಿ ಒಣ ಕಸ ಮನೆಯಲ್ಲಿಯೇ ಬಿಟ್ಟು ಹೋಗಲಾಗುತ್ತಿದೆ. ಒಣ ಕಸಗಳಲ್ಲಿಯೂ ಜನರ ಆರೋಗ್ಯಕ್ಕೆ ಹಾನಿ ಆಗುವಂತಹ ಕಸಗಳಿರುವುದರಿಂದ ಈ ವಿಂಗಡಣೆಯಿಂದ ಜನರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಮಾತ್ರವಲ್ಲ ಪ್ರತೀ ಶುಕ್ರವಾರ ಒಣಕಸಗಳನ್ನು ಮಾತ್ರ ಸಂಗ್ರಹಿಸಿ ಹಸಿಕಸವನ್ನು ಮನೆಗಳಲ್ಲಿಯೇ ಕೊಳೆಯಲು ಬಿಟ್ಟು ಹೋಗಲಾಗುತ್ತಿದೆ. ಇದರಿಂದ ಮನೆಮಂದಿ ಗಬ್ಬುನಾತವನ್ನೂ ಅನುಭವಿಸಬೇಕಾಗುತ್ತದೆ,” ಎಂದು ಅಶ್ರಫ್ ಹೇಳಿದ್ದಾರೆ.

K Ashraf
ಕೆ.ಅಶ್ರಫ್

“ಈಗಾಗಲೇ ನಗರವನ್ನು ಕಾಡುತ್ತಿರುವ ಮಲೇರಿಯಾ, ಡೆಂಗುವಿನಂತಹ ಮಾರಕರೋಗ ಹೆಚ್ಚಾಗಿ ಇಲ್ಲಿನ ಜನ ಇನ್ನಷ್ಟು ತೊಂದರೆಗೊಳಗಾಗುವ ಸಾಧ್ಯತೆ ಇದೆ. ಒಂದೆಡೆ ಕೊರೋನದ ಹಾವಳಿ ಇನ್ನೊಂದೆಡೆ ಡೆಂಗ್ಯು ವಿನಂತಹ ಮಾರಕ ರೋಗದಿಂದ ಜಿಲ್ಲೆಯ ತೀವ್ರ ಸಂಕಷ್ಟದಲ್ಲಿರುವಾಗ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ,” ಎಂದಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಕಸ ಸಂಗ್ರಹದಲ್ಲಿ ಈ ವಿಂಗಡಣೆಯ ವಿಧಾನವನ್ನು ಬಿಟ್ಟು ಒಟ್ಟು ಸಂಗ್ರಹವಾಗುವ ಕಸ ಪ್ರತಿದಿನವೂ ವಿಲೇವಾರಿಗೊಳಿಸುವ ಅಗತ್ಯವಿದೆ. ಈ ವಿಚಾರದಲ್ಲಿ ವಿರೋಧ ಪಕ್ಷದವರೂ ಧ್ವನಿಗೂಡಿಸಬೇಕು. ಮನಪಾ ಆಡಳಿತವು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!