ಈದ್ ಪೂರ್ವ ದಿನ ದಿನಸಿ ಖರೀದಿಗೆ ಅಧಿಕ ಸಮಯ ನೀಡಲು ಮನವಿ : ಕೆ.ಅಶ್ರಫ್
ಮಂಗಳೂರು, ಮೇ 10, 2021: ಈದ್ ಪೂರ್ವ ದಿನ ದಿನಸಿ ಖರೀದಿಗೆ ಅಧಿಕ ಕಾಲಾವಕಾಶ ನೀಡಲು ಮಾಜಿ ಮೇಯರ್ ಹಾಗೂ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಕೆ ಅಶ್ರಫ್ ಮನವಿ ಮಾಡಿದ್ದಾರೆ.
” ಮೇ 11 ರಂದು ಸಂಭಾವ್ಯ ಚಂದ್ರದರ್ಷನವಾದರೆ ಮುಂದಿನ ದಿನ ಮುಸ್ಲಿಮರು ಈದ್ ಹಬ್ಬ ಆಚರಿಸಲು ಮತ್ತು ಆ ದಿನಕ್ಕೆ ಅಗತ್ಯವಿರುವ ವಿಶೇಷ ಆಹಾರ ಸಮಾಗ್ರಿ,ಧಾನ್ಯ, ಸಿಹತಿನಿಸುಗಳು, ಹಾಲು, ಮಾಂಸ ಇತ್ಯಾದಿಗಳನ್ನು ಖರೀದಿಸಲು, ಲಾಕ್ ಡೌನ್ ವಿನಾಯಿತಿ ಅವಧಿಯನ್ನು ಕನಿಷ್ಟ ಎರಡು ಘಂಟೆ ಹೆಚ್ಚುವರಿಯಾಗಿ- 12 ಘಂಟೆ ತನಕ ನೀಡಬೇಕು,” ಎಂದು ಕೆ ಅಶ್ರಫ್ ವಿನಂತಿಸಿದ್ದಾರೆ.
“ಅವಧಿ ಕಡಿಮೆಯಾದರೆ ಜನದಟ್ಟಣೆ ಅಧಿಕವವಾಗಿ ಸೋಂಕು ಸೃಷ್ಟಿ ಸಾಧ್ಯತೆ ಹೆಚ್ಚು.ಆದುದರಿಂದ ಅಧಿಕ ಅವಧಿ ನೀಡಿದರೆ ಉತ್ತಮ. ಕೋವಿ ಡ್ ಸಂಧಿಗ್ಧತೆ ಯಿಂದಾಗಿ ಮುಸ್ಲಿಮ್ ಸಮುದಾಯದ ಜನರಿಗೆ ಕಳೆದ ವರ್ಷವೂ ಮುಕ್ತ ರಂಝಾನ್ ಮತ್ತು ಈದ್ ಆಚರಣೆ ಲಬ್ಯವಾಗದೆ, ಈ ವರ್ಷವೂ ಕೂಡಾ ರಂಝಾನ್ ಮತ್ತು ಈದ್ ಆಚರಣೆ ವ್ಯತ್ಯಯವಾಗಿದೆ. ಈ ಕಾರಣದಿಂದ ಉಸ್ತುವಾರಿ ಸಚಿವರು, ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಅರಿತು ಎರಡು ಘಂಟೆ ಅಧಿಕ ಅವಧಿಯನ್ನು ಅಗತ್ಯ ದಿನಸಿ ಖರೀದಿಗೆ ನೀಡಬೇಕು,” ಎಂದು ವಿನಂತಿಸಿದ್ದಾರೆ.